ಉಡುಪಿ: ಅ#ಪಘಾತ ಪ್ರಕರಣದಲ್ಲಿ ಎರಡು ವರ್ಷದ ಬಳಿಕ ಆರೋಪಿಗೆ ಜೈ#ಲು ಶಿ#ಕ್ಷೆ

ಉಡುಪಿ: ಅ#ಪಘಾತ ಪ್ರಕರಣದಲ್ಲಿ ಎರಡು ವರ್ಷದ ಬಳಿಕ ಆರೋಪಿಗೆ ಜೈ#ಲು ಶಿ#ಕ್ಷೆ

ಉಡುಪಿ (Headlines Kannada): ದುಡುಕುತನ ಹಾಗೂ ನಿರ್ಲಕ್ಯದಿಂದ ಕಾರು ಚಲಾಯಿಸಿ ಪಾದಚಾರಿಗೆ ಡಿ#ಕ್ಕಿ ಹೊಡೆದು, ತೀವ್ರ ಸ್ವರೂಪದ ಗಾಯಗೊಳಿಸಿದ ಆರೋಪಿಗೆ ನಗರದ 1 ನೇ ಹೆಚ್ಚುವರಿ ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯವು ಜೈ#ಲು ಶಿ#ಕ್ಷೆ ಹಾಗೂ ದಂಡ ವಿಧಿಸಿದೆ.

2020 ಜನವರಿ 7 ರಂದು ಸಂಜೆ 7 ಗಂಟೆಯ ಸುಮಾರಿಗೆ ಕೆಳಾರ್ಕಳ ಬೆಟ್ಟು ನಿವಾಸಿ ಆಲ್ವಿನ್ ಲಾರೆನ್ಸ್ ಎಂಬಾತನು ಪುತ್ತೂರು ಗ್ರಾಮದ ರಾ. ಹೆ 66 ರಲ್ಲಿ ದುಡುಕುತನ ಹಾಗೂ ನಿರ್ಲಕ್ಷ್ಯದಿಂದ ತನ್ನ ಕಾರನ್ನು ಎಡ ಬದಿಗೆ ಚಲಾಯಿಸಿ, ರಸ್ತೆ ಅಂಚಿನಲ್ಲಿ ನಿಂತಿದ್ದ ಜೋಸೆಫ್ ಮಿನೇಜಸ್ ಎಂಬುವವರಿಗೆ ಢಿ#ಕ್ಕಿ ಹೊಡೆದ ಪರಿಣಾಮ ಅವರು ರಸ್ತೆಗೆ ಎಸೆಯಲ್ಪಟ್ಟು ತಲೆಗೆ ತೀವ್ರ ಸ್ವರೂಪದ ಗಾಯವಾಗಿ ಹಾಗೂ ಬಲಗಾಲಿನ ಮೂಳೆ ಮುರಿತವಾಗಿರುವ ಹಿನ್ನೆಲೆ, ಸಂಚಾರ ಠಾಣೆಯ ವೃತ್ತ ನಿರೀಕ್ಷಕರು ಪ್ರಕರಣ ದಾಖಲಿಸಿಕೊಂಡು ಆರೋಪಿಯ ವಿರುದ್ಧ ದೋಷಾರೋಪಣೆ ಪತ್ರ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆದು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 1 ನೇ ಹೆಚ್ಚುವರಿ ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶ ಶ್ಯಾಮ್ ಪ್ರಕಾಶ್ ಅವರು ಆರೋಪಿ ಆಲ್ವಿನ್ ಲಾರೆನ್ಸ್ ಎಂಬಾತನಿಗೆ 6 ತಿಂಗಳ ಕಾ#ರಾಗೃಹ ವಾಸ ಶಿ#ಕ್ಷೆ ಹಾಗೂ 2000 ರೂ. ದಂಡ ವಿಧಿಸಿ, ತೀರ್ಪು ನೀಡಿರುತ್ತಾರೆ. ಸರಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕಿ ಮೋಹಿನಿ ಕೆ ವಾದ ಮಂಡಿಸಿದ್ದಾರೆ

Ads on article

Advertise in articles 1

advertising articles 2

Advertise under the article