
ಶಾಲಾ ಮಧ್ಯಾಹ್ನದ ಬಿಸಿಯೂಟದಲ್ಲಿ ಚಿಕನ್, ಹಣ್ಣುಗಳ ಪೂರೈಕೆ; ಇಂಥ ನಿರ್ಧಾರ ಪ್ರಕಟಿಸಿದ ರಾಜ್ಯ ಯಾವುದು ಗೊತ್ತಾ...?
Friday, January 6, 2023
ಕೊಲ್ಕತ್ತ(Headlines Kannada): ಪಶ್ಚಿಮ ಬಂಗಾಳ ಸರ್ಕಾರ ಎಲ್ಲ ರಾಜ್ಯಗಳಿಗಿಂದ ಒಂದು ಹೆಜ್ಜೆ ಮುಂದಿಟ್ಟಿದ್ದು, ಜನವರಿ 23 ರಿಂದ ಮುಂದಿನ 4 ತಿಂಗಳವರೆಗೂ ಮಧ್ಯಾಹ್ನದ ಬಿಸಿಯೂಟದಲ್ಲಿ ಚಿಕನ್ ಮತ್ತು ಹಣ್ಣುಗಳನ್ನು ಪೂರೈಸಲು ನಿರ್ಧರಿಸಿದೆ.
ಮಧ್ಯಾಹ್ನದ ಬಿಸಿಯೂಟಕ್ಕಾಗಿ ಸರ್ಕಾರ ರೂ.371 ಕೋಟಿ ರೂ. ಹಂಚಿಕೆ ಮಾಡಿದೆ. ಪ್ರಧಾನ ಮಂತ್ರಿ ಪೋಷಣ್ ಅಭಿಯಾನದಡಿ ಮುಂದಿನ 4 ತಿಂಗಳ ಕಾಲ ವಾರಕ್ಕೊಮ್ಮೆಯಂತೆ ಹೆಚ್ಚುವರಿ ಪೌಷ್ಠಿಕಯುಕ್ತ ಆಹಾರವಾಗಿ ಚಿಕನ್ ಮತ್ತು ಆಯಾ ಋತುವಿನ ಹಣ್ಣುಗಳನ್ನು ಪೂರೈಸಲಾಗುವುದು ಎಂದು ಅಧಿಕೃತ ನೋಟಿಫಿಕೇಷನ್ ನಲ್ಲಿ ತಿಳಿಸಲಾಗಿದೆ.
ಈಗ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟದಲ್ಲಿ ಅನ್ನ, ಬೇಳೆ, ತರಕಾರಿ, ಸೋಯಾಬಿನ್ ಹಾಗು ಮೊಟ್ಟೆಗಳನ್ನು ನೀಡಲಾಗುತ್ತಿದೆ. ಜನವರಿ ತಿಂಗಳ 23 ರಿಂದ ಏಪ್ರಿಲ್ 23ರವರೆಗೂ ವಾರದ ವಿವಿಧ ದಿನಗಳಲ್ಲಿ ಹೆಚ್ಚುವರಿ ಆಹಾರ ಪದಾರ್ಥಗಳನ್ನು ಪೂರೈಸಲಾಗುವುದು ಎಂದು ತಿಳಿಸಲಾಗಿದೆ.