ಬಿಜೆಪಿ ಸೇರ್ಪಡೆ ಬಗ್ಗೆ ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದು ಹೀಗೆ....!
ಮಂಡ್ಯ: ನಾನು ಬಿಜೆಪಿ ಸೇರ್ಪಡೆಯ ಬಗ್ಗೆ ಯೋಚನೆ ಮಾಡಿಲ್ಲ. ಬಿಜೆಪಿ ನಾಯಕರು ಈ ಬಗ್ಗೆ ಮಾತನಾಡಿದ್ದು, ನಾನು ಈ ಬಗ್ಗೆ ನಿರ್ಧಾರ ಮಾಡಿಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್ ಸ್ಪಷ್ಟಪಡಿಸಿದ್ದಾರೆ.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯಕ್ಕೆ ನಾನು ಬಿಜೆಪಿ ಸೇರ್ಪಡೆಯಾಗುವ ವಿಚಾರ ಇಲ್ಲ. ಫ್ಲೆಕ್ಸ್ ನಲ್ಲಿ ಅವರವರ ಅಭಿಮಾನಕ್ಕೆ ನನ್ನ ಫೋಟೋ ಹಾಕಿದ್ದಾರೆ ಅಷ್ಟೇ. ಅದಕ್ಕೂ ನನಗೂ ಯಾವುದೇ ರೀತಿಯ ಸಂಬಂಧವಿಲ್ಲ. ಸಚ್ಚಿದಾನಂದಗೆ ನನ್ನ ಬೆಂಬಲ ಇದೆ ಎನ್ನುವುದನ್ನು ನಾನು ಓಪನ್ ಆಗಿ ಘೋಷಣೆ ಮಾಡಿದ್ದೇನೆ. ಈ ಹಿನ್ನೆಲೆಯಲ್ಲಿ ಸಚ್ಚಿ ಬ್ಯಾನರ್ ನಲ್ಲಿ ನನ್ನ ಫೋಟೋ ಹಾಕಿಕೊಂಡಿದ್ದಾರೆ ಅದಕ್ಕೆ ವಿವಿಧ ಬಣ್ಣ ಕಟ್ಟಿ ಬೇರೆ ಬೇರೆ ಅರ್ಥ ಕಲ್ಪಿಸಿಕೊಂಡರೆ ನಾನು ಏನು ಮಾಡೋಕೆ ಆಗಲ್ಲ ಎಂದರು.
ಬಿಜೆಪ ಪಕ್ಷ ಸೇರ್ಪಡೆಯ ಬಗ್ಗೆ ನಾನು ಯಾವುದೇ ಸಭೆ ಮಾಡುತ್ತಿಲ್ಲ, ನಾನು ಹೋದ ಕಡೆ ಜನರನ್ನು BJP ಪಕ್ಷ ಸೇರ್ಪಡೆ ಬಗ್ಗೆ ಕೇಳ್ತಾ ಇದ್ದೀನಿ. ಜನರು ಬಿಜೆಪಿ ಸೇರ್ಪಡೆ ಬಗ್ಗೆ ಕೇಳ್ತಾ ಇದ್ದಾರೆ. ಜನರು ಸದ್ಯಕ್ಕೆ ಸೇರ್ಪಡೆ ಬೇಡ ಎಂದು ಹೇಳುತ್ತಾ ಇದ್ದಾರೆ. ನಾನು ಈ ಬಗ್ಗೆ ಯಾವುದೇ ನಿರ್ಧಾರ ಮಾಡಿಲ್ಲ. ಮುಂದೆ ನಮ್ಮ ಜನರೇ ಪಕ್ಷ ಸೇರ್ಪಡೆ ಬಗ್ಗೆ ನಿರ್ಧಾರ ಮಾಡ್ತಾರೆ. BJP ಪಕ್ಷಕ್ಕೆ ಸೇರುವ ಪರಿಸ್ಥಿತಿ ಬಂದಾಗ ಹೇಗೆ ಮಾಡಬೇಕೆಂದು ಯೋಚನೆ ಮಾಡ್ತೀನಿ. ಇಲ್ಲಿಯವರೆಗೆ ನಾನು ಬಿಜೆಪಿ ಸೇರುವ ಬಗ್ಗೆ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಸುಮಲತಾ ಅಂಬರೀಶ್ ಹೇಳಿದ್ದಾರೆ.