ಸಣ್ಣ ಪ್ರಾಯದಲ್ಲೇ ನಿಮ್ಮ ಕೂದಲು ಬಿಳಿಯಾಗುವುದಕ್ಕೆ ಕಾರಣ ಏನು ಗೊತ್ತೇ..?ಕೂದಲು ಬಿಳಿಯಾಗದಂತೆ ತಡೆಗಟ್ಟಲು ಏನು ತಿನ್ನಬೇಕು...ಇಲ್ಲಿದೆ ಮಾಹಿತಿ

ಸಣ್ಣ ಪ್ರಾಯದಲ್ಲೇ ನಿಮ್ಮ ಕೂದಲು ಬಿಳಿಯಾಗುವುದಕ್ಕೆ ಕಾರಣ ಏನು ಗೊತ್ತೇ..?ಕೂದಲು ಬಿಳಿಯಾಗದಂತೆ ತಡೆಗಟ್ಟಲು ಏನು ತಿನ್ನಬೇಕು...ಇಲ್ಲಿದೆ ಮಾಹಿತಿ



ಬಿಳಿ ಕೂದಲಿನ ಸಮಸ್ಯೆ ಇದು ಕೇವಲ ಹಿರಿಯರಿಗೆ ಮಾತ್ರ ಕಾಡುದಲ್ಲ. ಶಾಲೆ, ಕಾಲೇಜು ವಿದ್ಯಾರ್ಥಿಗಳನ್ನೂ, ಸಣ್ಣ ಪ್ರಾಯದ ಮಕ್ಕಳಲ್ಲೂ ಕೂಡ ಈ ಬಿಳಿ ಕೂದಲು ಸಮಸ್ಯೆ ಕಾಡುತ್ತಿದೆ. ಇದಕ್ಕೆ ಮೂಲ ಕಾರಾಣ ಇತ್ತೀಚಿನ ದಿನಗಳಲ್ಲಿ ಕೆಟ್ಟ ಜೀವನಶೈಲಿ ಹಾಗು ಆಹಾರದಿಂದ ಕೂದಲು ಸಮಯಕ್ಕಿಂತ ಮುಂಚೆಯೇ ಬಿಳಿಯಾಗಲು ಪ್ರಾರಂಭಿಸುತ್ತದೆ.

ಬಿಳಿ ಕೂದಲಿನ ಸಮಸ್ಯೆ ಹೆಚ್ಚಾಗಿ 25ರಿಂದ 30 ವರ್ಷದ ಯುವಕರಲ್ಲಿ ಕಾಣಸಿಗುತ್ತದೆ. ಇದರಿಂದಾಗಿ ಅವರು ಒಂದು ರೀತಿಯ ಕಿರಿಕಿರಿ, ಮುಜುಗರ ಮತ್ತು ಆತ್ಮವಿಶ್ವಾಸದ ಕೊರತೆಯನ್ನು ಸೃಷ್ಟಿಯಾಗುತ್ತದೆ.  ಕೂದಲು ಅವಧಿಗಿಂದ ಮುಂಚೆ ಬಿಳಿಯಾಗುವುದಕ್ಕೆ ಹಲವು ಕಾರಣಗಳಿರಬಹುದು.

ಸಣ್ಣ ವಯಸ್ಸಿನಲ್ಲೇ ಕೂದಲು ಬಿಳಿಯಾಗಲು ವಿಟಮಿನ್ ಸಿ ಕೊರತೆಯೇ ಕಾರಣ ಎನ್ನುತ್ತಾರೆ ವೈದ್ಯರು.  ವಿಟಮಿನ್ ಸಿ ದೇಹದಲ್ಲಿ ಕಾಲಜನ್ ಪ್ರಮಾಣವನ್ನು ಹೆಚ್ಚಿಸುತ್ತದೆ, ಇದು ನಿಮ್ಮ ಕೂದಲು ಬಿಳಿಯಾಗುವುದನ್ನು ತಡೆಯುತ್ತದೆ. ಜೊತೆಗೆ ಕೂದಲು ಬಲಗೊಳ್ಳುವಂತೆ ಮಾಡುತ್ತದೆ ಹಾಗು ಶುಷ್ಕತೆ ನಿವಾರಣೆಯಾಗುತ್ತದೆ. ಆರೋಗ್ಯ ತಜ್ಞರ ಪ್ರಕಾರ, ಮನುಷ್ಯರ ಕೂದಲು ಬೆಳವಣಿಗೆಗೆ ಆಹಾರದಲ್ಲಿ ವಿಟಮಿನ್ ಸಿ ಬಹಳ ಮುಖ್ಯ ಪಾತ್ರವನ್ನು ವಹಿಸುತ್ತದೆ.

ವಿಟಮಿನ್ ಸಿ ಹೆಚ್ಚಿಸಬೇಕಿದ್ದರೆ ಅನೇಕ ತರಕಾರಿಗಳು ಮತ್ತು ಹಣ್ಣುಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕಂಡುಬರುತ್ತದೆ. ನೀವು ಪ್ರತಿದಿನ ತಿನ್ನುವ ಆಹಾರದಲ್ಲಿ 4 ಗ್ರಾಂ ವಿಟಮಿನ್ ಭರಿತ ಪೋಷಕಾಂಶಗಳನ್ನು ಸೇವಿಸಿದರೆ, ನಿಮ್ಮ ರಕ್ತ ಪರಿಚಲನೆಯು ಉತ್ತಮವಾಗುತ್ತದೆ ಹಾಗು ಕೂದಲಿಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳು ನಿಮ್ಮಿಂದ ದೂರವಿರುತ್ತವೆ.

ವಿಟಮಿನ್ ಸಿ ಇರುವ ಹಣ್ಣುಗಳೆಂದರೆ ಕಿತ್ತಳೆ, ದ್ರಾಕ್ಷಿಹಣ್ಣು, ಪೇರಲ ಮತ್ತು ಪಪ್ಪಾಯಿ,  ತರಕಾರಿಗಳಲ್ಲಿ ಅದು ವಿಶೇಷವಾಗಿ ಎಲೆಕೋಸು, ಕೋಸುಗಡ್ಡೆ, ಪಾಲಕ ಮತ್ತು ಟೊಮೆಟೊಗಳನ್ನು ತಿನ್ನುವುದರಿಂದ ಉತ್ತಮ ಪ್ರಯೋಜನವನ್ನು ನೀಡುತ್ತದೆ. 


Ads on article

Advertise in articles 1

advertising articles 2

Advertise under the article