ಕನ್ನಡ ಚಿತ್ರ ರಂಗದ ಹಿರಿಯ ಹಾಸ್ಯ ನಟ ಮನ್ದೀಪ್ ರಾಯ್ ಹೃ#ದಯಾಘಾತದಿಂದ ನಿ#ಧನ
ಬೆಂಗಳೂರು(Headlines Kannada): ಕನ್ನಡ ಚಿತ್ರರಂಗದ ಹಿರಿಯ ಹಾಸ್ಯ ನಟ ಮನ್ದೀಪ್ ರಾಯ್ ಹೃ#ದಯಾಘಾತದಿಂದ ಕೊ#ನೆಯುಸಿರೆಳೆದಿದ್ದಾರೆ.
ಬೆಂಗಳೂರಿನ ಕಾವಲ್ಭೈರಸಂಧ್ರದ ನಿವಾಸದಲ್ಲಿ ಮನ್ದೀಪ್ ಮೃ#ತಪಟ್ಟಿದ್ದಾರೆ. ರಾತ್ರಿ 1.45ರ ಸುಮಾರಿಗೆ ಹೃ#ದಯಾಘಾತದಿಂದ ಅವರ ಸಾ#ವನ್ನಪ್ಪಿದ್ದಾರೆ. ಇಂದು ಬೆಳಗ್ಗೆ 11 ಗಂಟೆಗೆ ಹೆಬ್ಬಾಳದ ಚಿತಾಗಾರದಲ್ಲಿ ಅವರ ಅಂ#ತ್ಯಕ್ರಿಯೆ ನಡೆಯಲಿದೆ ಈ ಕುರಿತು ಮನ್ದೀಪ್ ಪುತ್ರಿ ಅಕ್ಷತಾ ಹೇಳಿದ್ದಾರೆ.
ಕಳೆದ ತಿಂಗಳಲ್ಲಿ ಹೃ#ದಯಾಘಾತವಾಗಿತ್ತು, ಅವರನ್ನು ಬೆಂಗಳೂರಿನ ಶೇಷಾದ್ರಿಪುರಂನಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮನ್ದೀಪ್ ಅವರಿಗೆ 75 ವರ್ಷ ವಯಸ್ಸಾಗಿತ್ತು. 500ಕ್ಕೂ ಅಧಿಕ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಅನಂತ್ ನಾಗ್, ಶಂಕರ್ ನಾಗ್, ಡಾ. ರಾಜ್ಕುಮಾರ್ ಸೇರಿದಂತೆ ಅನೇಕ ದಿಗ್ಗಜ ನಟರ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ ಖ್ಯಾತಿ ಅವರಿಗಿದೆ. ಹಾಸ್ಯ ನಟನಾಗಿ ಅವರು ಖ್ಯಾತಿಗಳಿಸಿದ್ದರು.
ಕನ್ನಡದ ಮಿಂಚಿನ ಓಟ, ಬಾಡದ ಹೂವು, ಆಕಸ್ಮಿಕ, ಅಗ್ನಿ ಐಪಿಎಸ್, ದೀಪಾವಳಿ, ಅಯ್ಯ, ಅಪೂರ್ವ ಸಂಗಮ, ಪ್ರೀತ್ಸೋದ್ ತಪ್ಪಾ, ಏಳು ಸುತ್ತಿನ ಕೋಟೆ, ಗಜಪತಿ ಗರ್ವಭಂಗ, ಆಸೆಗೊಬ್ಬ ಮೀಸೆಗೊಬ್ಬ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಮನ್ದೀಪ್ ರಾಯ್ ನಟಿಸಿದ್ದಾರೆ.