ರಾಯಣ್ಣನ ಹೋರಾಟ, ಶೌರ್ಯ, ಧೈರ್ಯವು, ಯುವ ಜನರಿಗೆ ಸ್ಫೂರ್ತಿಯಾಗಿದೆ: ಕುರಕುಂದಾ ಮಲ್ಲು ಹಲಗಿ

ರಾಯಣ್ಣನ ಹೋರಾಟ, ಶೌರ್ಯ, ಧೈರ್ಯವು, ಯುವ ಜನರಿಗೆ ಸ್ಫೂರ್ತಿಯಾಗಿದೆ: ಕುರಕುಂದಾ ಮಲ್ಲು ಹಲಗಿ

ಯಾದಗಿರಿ: ಬ್ರಿಟಿಷರ ವಿರುದ್ಧ ರಾಣಿ ಚನ್ನಮ್ಮನ ನೇತೃತ್ವದಲ್ಲಿ ಕಿತ್ತೂರು ಸಂಸ್ಥಾನ ದೊಡ್ಡ ಹೋರಾಟ ಮಾಡಿತ್ತು. ಈ ಹೋರಾಟಕ್ಕೆ ಬಲವಾಗಿ ನಿಂತವರು ಸಂಗೊಳ್ಳಿ ರಾಯಣ್ಣ. ರಾಯಣ್ಣನ ಹೋರಾಟ, ಶೌರ್ಯ, ಧೈರ್ಯ ಹಾಗೂ ಬಲಿದಾನ ಇಂದಿನ ಯುವ ಜನರಿಗೆ ಸ್ಫೂರ್ತಿಯಾಗಿದೆ ಎಂದು ಯಾದಗಿರಿ ಜಿಲ್ಲಾ ಕಾಂಗ್ರೆಸ್ ಎಸ್ಸಿ ಘಟಕ ಸಂಘಟನಾ ಕಾರ್ಯದರ್ಶಿ ಹಾಗೂ ಕುರಕುಂದಾ ಗ್ರಾಮ ಪಂಚಾಯತಿ ಮಾಜಿ ಉಪಾಧ್ಯಕ್ಷರಾದ ಮಲ್ಲು ಹಲಗಿ ಹೇಳಿದ್ದಾರೆ.

ಯಾದಗಿರಿ ಜಿಲ್ಲೆಯ ವಡಗೇರಾ ತಾಲ್ಲೂಕಿನ ಕುರಕುಂದಾ ಗ್ರಾಮದಲ್ಲಿ ಹಾಲುಮತ ಸಮುದಾಯದ ವತಿಯಿಂದ ಹಮ್ಮಿಕೊಂಡಿದ್ದ ಸಂಗೊಳ್ಳಿ ರಾಯಣ್ಣ ಅವರ 192ನೇ  ಹುತಾತ್ಮ ದಿನಾಚರಣೆ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಲ್ಲು ಹಲಗಿ ಕುರಕುಂದಾ ಅವರು ಮಾತನಾಡಿದರು. 

ಈ ಸಂದರ್ಭದಲ್ಲಿ ದೊಡ್ಡ ನಿಂಗಪ್ಪ ಪೂಜಾರಿ, ಮುದುಕಪ್ಪ ಜೋಳದಡಗಿ, ನಾಗಪ್ಪ ಪೂಜಾರಿ, ಹೈಯಾಳಪ್ಪ ಕುರಿ, ಪೂಜಪ್ಪ ಪೂಜಾರಿ, ಶಂಕರ್ ಗೌಡ, ಅಯ್ಯಪ್ಪ ಜೊಳದಡಿಗಿ, ನರಸಪ್ಪ ಸಿಂಗಾರಿ, ಮಾಳಪ್ಪ ಪೂಜಾರಿ, ದೇವು ಜೋಳದಡಿಗಿ, ಬಸವರಾಜ್ ಅಂಗಡಿ, ಸಹೇಬರೆಡ್ಡಿ ಕುರಿ,  ನಿಂಗಪ್ಪ ಕುರಿ, ದೇವಪ್ಪ ಬಾಣಿ, ಮಲ್ಲಿಕಾರ್ಜುನ್ ಪೂಜಾರಿ, ಬೀರು ವಗ್ಗರು, ಹಯಾಳಪ್ಪ ಗೌಂಡಿ ದೋರನಳ್ಳಿ, ಭೀರಲಿಂಗ ಪೂಜಾರಿ ಹಾಗೂ ಇನ್ನಿತರರು ಹಾಜರಿದ್ದರು.

Ads on article

Advertise in articles 1

advertising articles 2

Advertise under the article