
ಹತ್ತಿ ಬೆಲೆ ಏರಿಸುವಂತೆ ಸರಕಾರವನ್ನು ಆಗ್ರಹಿಸಿದ ಮಲ್ಲು ಹಲಗಿ ಕುರಕುಂದಾ
Saturday, January 14, 2023
ಯಾದಗಿರಿ(Headlineskannada): ಸಂಕಷ್ಟದಲ್ಲಿರುವ ರೈತರಿಗೆ ಸಹಾಯಹಸ್ತ ನೀಡುವ ಜೊತೆಗೆ ಹತ್ತಿ ಬೆಲೆಯನ್ನು ಏರಿಕೆಮಾಡಬೇಕು ಎಂದು ಯಾದಗಿರಿ ಜಿಲ್ಲಾ ಕಾಂಗ್ರೆಸ್ ಎಸ್ಸಿ ವಿಭಾಗ ಸಂಘಟನಾ ಕಾರ್ಯದರ್ಶಿ ಮಲ್ಲು ಎಂ.ಹಲಗಿ ಕುರಕುಂದಾ ಸರಕಾರವನ್ನು ಒತ್ತಾಯಿಸಿದ್ದಾರೆ.
ಈಗಾಗಲೇ ರೈತರು ಹಿಂದೆ ಕರೋನ ಸಂಕಷ್ಟ ಹಾಗೂ ಸತತವಾಗಿ ಸುರಿದ ಮಳೆಯಿಂದ ರೈತರು ತುಂಬಾ ಕಷ್ಟದಲ್ಲಿ ಇದ್ದಾರೆ. ರೈತರ ಬೆಳೆದ ಬೆಳೆಗೆ ಮಾರುಕಟ್ಟೆಯಲ್ಲಿ ಹೆಚ್ಚು ಬೆಲೆ ಸಿಗದೆ ಬೆಲೆ ಇಳಿಕೆ ಯಾಗಿದೆ, ಹಿಂದೆ ಜಿಲ್ಲೆಯಲ್ಲಿ ಹತ್ತಿಯ ಬೆಲೆ ಹೆಚ್ಚುಯಿತ್ತು ಇಗ ಏಕಾಏಕಿಯಾಗಿ ತೀರಾ ಕಡಿಮೆ ಆಗಿದೆ ರೈತರು ಬೆಳೆದ ಬೆಳೆಗಳಿಗೆ ನಿಗದಿ ಬೆಲೆ ಇಲ್ಲದಿರುವುದರಿಂದ ನಷ್ಟ ಅನುಭವಿಸುತ್ತಿದ್ದಾರೆ. ಈ ಸಂಬಂಧ ಸರ್ಕಾರ ಅನ್ನದಾತರ ನೆರವಿಗೆ ಧಾವಿಸಿ ಹತ್ತಿ ಬೆಲೆಯನ್ನು ಒಂದು ಕ್ವಿಂಟಲ್ ಗೆ 15 ಸಾವಿರ ಏರಿಕೆ ಮಾಡಿ ರೈತರಿಗೆ ನ್ಯಾಯ ಒದಗಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.