ವೇಷ ಬದಲಾಯಿಸಿಕೊಂಡು ಗುಜರಾತಿನಲ್ಲಿ ಆರಾಮವಾಗಿದ್ದ ಸ್ಯಾಟ್ರೋ ರವಿ! ತೀವ್ರ ಹುಡುಕಾಟ ನಡೆಸಿ ಒಟ್ಟು ನಾಲ್ಕು ಮಂದಿಯನ್ನು ಬಂಧಿಸಿದ ಪೊಲೀಸರು

ವೇಷ ಬದಲಾಯಿಸಿಕೊಂಡು ಗುಜರಾತಿನಲ್ಲಿ ಆರಾಮವಾಗಿದ್ದ ಸ್ಯಾಟ್ರೋ ರವಿ! ತೀವ್ರ ಹುಡುಕಾಟ ನಡೆಸಿ ಒಟ್ಟು ನಾಲ್ಕು ಮಂದಿಯನ್ನು ಬಂಧಿಸಿದ ಪೊಲೀಸರುಬೆಂಗಳೂರು: ಕೆಲವು ದಿನಗಳಿಂದ ರಾಜ್ಯ ರಾಜಕೀಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿದ್ದ ವರ್ಗಾವಣೆ ದಂ#ಧೆಯ ಕಿಂ#ಗ್‌ಪಿನ್, ವೇ#ಶ್ಯಾ#ವಾಟಿಕೆ ದಂ#ಧೆಯ ಮಾಸ್ಟರ್ ಸ್ಯಾಂಟ್ರೋ ರವಿಯನ್ನು ಮೈಸೂರು ಪೊಲೀಸರು ಕೊನೆಗೂ ಗುಜರಾತ್‌ನಲ್ಲಿ ಬಂಧಿಸಿದ್ದು, ಜೊತೆಗೆ ಇತರ ಮೂವರನ್ನು ಬಂಧಿಸಲಾಗಿದೆ.

ರಾಮ್ ಜಿ,  ಸತೀಶ್, ಮಧುಸೂದನ್ ಬಂಧಿತ ಇತರ ಆರೋಪಿಗಳಾಗಿದ್ದಾರೆ. ತನ್ನ ವಿಗ್‌ ತೆಗೆದು, ಮೀಸೆ ಬೋಳಿಸಿ ಬೇರೆ ರೀತಿಯೇ ಕಾಣುವಂತೆ ತನ್ನ ವೇಷ ಬದಲಾಯಿಸಿಕೊಂಡು ಸ್ಯಾಂಟ್ರೋ ರವಿ ಗುಜರಾತಿನಲ್ಲಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಹುಡುಕಾಟ ನಡೆಸುತ್ತಿದ್ದಂತೆಯೇ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸುತ್ತ ಎಸ್ಕೇಪ್ ಆಗುತ್ತಿದ್ದ ಸ್ಯಾಂಟ್ರೋ ರವಿಗಾಗಿ 7 ರಾಜ್ಯಗಳಲ್ಲಿ ಪೊಲೀಸರು ಆತನಿಗಾಗಿ ಹುಡುಕಾಟ ನಡೆಸಿದ್ದು, ಕೊನೆಗೂ 10 ದಿನಗಳ ನಂತರ ಶುಕ್ರವಾರ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

ಈತನ ಬಂಧನಕ್ಕಾಗಿ 4 ಐಪಿಎಸ್ ಅಧಿಕಾರಿಗಳ ನೇತೃತ್ವದಲ್ಲಿ 11 ಟೀಂಗಳಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಗುಜರಾತ್‌ನ ಪ್ರತಿಷ್ಠಿತ ಹೋಟೆಲ್ ಒಂದರಲ್ಲಿ ಆರೋಪಿ ರವಿ ಇರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರ ತಂಡ ಶುಕ್ರವಾರ ಮಧ್ಯಾಹ್ನ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

Ads on article

Advertise in articles 1

advertising articles 2

Advertise under the article