ಯಾದಗಿರಿ ಜಿಲ್ಲಾ ಕಾಂಗ್ರೆಸ್ ಎಸ್ಸಿ ಘಟಕದ ಸಂಘಟನಾ ಕಾರ್ಯದರ್ಶಿಯಾಗಿ ಮಲ್ಲು ಹಲಗಿ ಕುರಕುಂದಾ ನೇಮಕ

ಯಾದಗಿರಿ ಜಿಲ್ಲಾ ಕಾಂಗ್ರೆಸ್ ಎಸ್ಸಿ ಘಟಕದ ಸಂಘಟನಾ ಕಾರ್ಯದರ್ಶಿಯಾಗಿ ಮಲ್ಲು ಹಲಗಿ ಕುರಕುಂದಾ ನೇಮಕ

ಯಾದಗಿರಿ(Headlines Kannada): ಕೆಪಿಸಿಸಿ ಎಸ್.ಸಿ ಘಟಕದ ರಾಜ್ಯಾಧ್ಯಕ್ಷರಾದ ಆರ್.ಧರ್ಮಸೇನಾ ಅವರ ಲಿಖಿತ ಆದೇಶದ ಮೇರೆಗೆ, ಯಾದಗಿರಿ ಜಿಲ್ಲೆಯ ವಡಗೇರಾ ತಾಲ್ಲೂಕಿನ ಕುರಕುಂದಾ ಗ್ರಾಮದ  ಗ್ರಾಮ ಪಂಚಾಯತಿ ಮಾಜಿ ಉಪಾಧ್ಯಕ್ಷ ಕಾಂಗ್ರೆಸ್‌ ಯುವ ಮುಖಂಡ ಮಲ್ಲು ಹಲಗಿ ಅವರನ್ನು, ಯಾದಗಿರಿ ಜಿಲ್ಲಾ ಕಾಂಗ್ರೆಸ್ ಎಸ್ಸಿ ವಿಭಾಗದ ಸಂಘಟನಾ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ ಎಂದು ಯಾದಗಿರಿ ಜಿಲ್ಲಾ ಕಾಂಗ್ರೆಸ್ ಎಸ್ಸಿ ವಿಭಾಗದ ಜಿಲ್ಲಾಧ್ಯಕ್ಷರಾದ ಮಲ್ಲಣ್ಣ ದಾಸನಕೇರಿ ತಿಳಿಸಿದ್ದಾರೆ.

ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ಜರುಗಿದ ಸರಳ ಸಭೆಯಲ್ಲಿ ನೇಮಕಾತಿ ಆದೇಶವನ್ನು ಹಸ್ತಾಂತರಿಸಿ  ಪಕ್ಷದ ಎಐಸಿಸಿ ಅದ್ಯಕ್ಷರಾದ ಡಾ. ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ ಅವರ ನಾಯಕತ್ವದಲ್ಲಿ ಪಕ್ಷ ಬಲಪಡಿಸಲು ಶ್ರಮಿಸುವಂತೆ ಸೂಚಿಸಿದ ಅವರು ಈ ನೇಮಕಾತಿಯು ನಿಮ್ಮ ಜೀವನದಲ್ಲಿ ಹೆಚ್ಚಿನ ಸ್ಥಾನಮಾನಗಳ ದೊರೆಯುವಿಕೆಗೆ ನಾಂದಿಯಾಗಲಿ ಎಂದು ಶುಭಕೋರಿ ಮಾತನಾಡಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಎಸ್ಸಿ ವಿಭಾಗದ ಯಾದಗಿರಿ  ವಿಕ್ಷಕರಾದ ಸುಧಾಮ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಬಸರಡ್ಡಿಗೌಡ ಅನಪೂರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮರೆಪ್ಪ ಬಿಳ್ಹಾರ, ಸುದರ್ಶನ ನಾಯಕ, ವಿಶ್ವನಾಥ ನಿಲಹಳ್ಳಿ, ಕೆಪಿಸಿಸಿ ವಿಕ್ಷಕರಾದ ರಾಘವೇಂದ್ರ ಮಾನಸಗಲ್, ಜಿಲ್ಲಾ ವಕ್ತರರಾದ ಸಾಮಸನ್ ಮಾಳಿಕೇರಿ, ಎನ್.ಎಸ್.ಯು.ಐ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಸಂಜಯಕುಮಾರ ಕವಲಿ ಮುಂಡರಗಿ, ಸೇವದಳ ಜಿಲ್ಲಾಧ್ಯಕ್ಷರಾದ ಲಕ್ಷ್ಮಣ ರಾಠೋಡ, ಎಸ್ಸಿ ವಿಭಾಗದ ಜಿಲ್ಲಾದ್ಯಕ್ಷ ಮಲ್ಲಣ್ಣ ದಾಸನಕೇರಿ, ಉಪಾದ್ಯಕ್ಷ ಬಸವರಾಜ ಗುತ್ತಿಪೇಟೆ, ಮಲ್ಲಿಕಾರ್ಜುನ ಎಂ. ಇಟೆ, ಮಾನಪ್ಪ ವಠಾರ ಸಗರ, ಸುರೇಶ್ ಹಾಲಗೇರಾ, ಮರಲಿಂಗಪ್ಪ ಹೊರಟೂರ, ಭೀರಲಿಂಗ ಪೂಜಾರಿ ಕುರಕುಂದಿ, ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article