ಏಪ್ರಿಲ್ 1ರಂದು ದುಬೈ ಯಲ್ಲಿ BCF ಇಫ್ತಾರ್ ಕೂಟ; ಚಯರ್ಮನ್ ಆಗಿ ಅಬ್ದುಲ್ ಲತೀಫ್ ಮುಲ್ಕಿ ಆಯ್ಕೆ
Friday, February 24, 2023
ದುಬೈ: ಅನಿವಾಸಿ ಭಾರತೀಯರ ಪ್ರತಿಷ್ಠಿತ ಸಂಘಟನೆಯಾದ ಬ್ಯಾರೀಸ್ ಕಲ್ಚರಲ್ ಫೋರಮ್, ದುಬೈ, ಇದರ ವತಿಯಿಂದ ಕಳೆದ ಎರಡು ದಶಕಗಳಿಂದ ಪ್ರತೀ ವರ್ಷ ನಡೆಸಿಕೊಂಡು ಬರುತ್ತಿರುವ ಇಫ್ತಾರ್ ಕೂಟವು ಈ ವರ್ಷ ಏಪ್ರಿಲ್ ತಿಂಗಳ 1 ರಂದು ದುಬೈ ಯಲ್ಲಿ ನಡೆಸುವುದೆಂದು ತೀರ್ಮಾನಿಸಲಾಗಿದೆ.
ಸರ್ವ ಧರ್ಮ ಸಮನ್ವಯ ಮತ್ತು ಸೌಹಾರ್ತೆಗೆ ಪ್ರಸಿದ್ಧವಾದ BCF ಇಫ್ತಾರಿನ ಚಯರ್ಮನ್ ಆಗಿ BCF ಉಪಾಧ್ಯಕ್ಷರಾದ ಅಬ್ದುಲ್ ಲತೀಫ್ ಮುಲ್ಕಿಯವರನ್ನು ಆರಿಸಲಾಯಿತು ಎಂದು ಬಿಸಿಫ್ ಅಧ್ಯಕ್ಷರಾದ ಡಾ B K ಯೂಸುಫ್ ಮತ್ತು ಕಾರ್ಯಕಾರೀ ಸಮಿತಿಯ ಸದಸ್ಯರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.