ಚಿನ್ನ ಪ್ರಿಯರಿಗೆ ಶಾಕ್ ನೀಡಿದ ಕೇಂದ್ರ ಬಜೆಟ್! ದೇಶದಲ್ಲಿ ಇನ್ನುಮುಂದೆ ಚಿನ್ನ, ಬೆಳ್ಳಿ, ವಜ್ರ ಬೆಲೆ ಏರಿಕೆ
ಲಿಥೀಯಂ ಬ್ಯಾಟರಿ ಮೇಲಿನ ಸುಂಕ ಬಜೆಟಿನಲ್ಲಿ ಕಡಿತ ಮಾಡಲಾಗಿದೆ, ಬಂಗಾರ, ಬೆಳ್ಳಿ, ವಜ್ರ ದುಬಾರಿಯಾಗಲಿದ್ದು, ಸಿಗರೇಟ್, ಪ್ಯಾಟಿನಂ, ರೆಡಿಮೆಡ್ ಬಟ್ಟೆಗಳು ಇನ್ನುಮುಂದೆ ಮತ್ತಷ್ಟು ದುಬಾರಿಯಾಗಲಿದೆ.
ಬ್ಲೆಂಡೆಡ್ ಸಿಎನ್ ಜಿಗೆ ಕಸ್ಟಮ್ಸ್ ಸುಂಕ ರದ್ದು ಮಾಡಲಾಗಿದ್ದು, ರೆಡಿಮೇಟ್ ಬಟ್ಟೆ ಬೆಲೆ ಏರಿಕೆಯಾಗಿದ್ದು, ಅಡುಗೆ ಮನೆಯ ಎಲೆಕ್ಟ್ರಿಕ್ ಚಿಮಣಿಗಳ ಬೆಲೆ ಇಳಿಕೆಯಾಗಿದೆ. ವಿದೇಶಿ ವಾಹನಗಳ ಆಮದು ದುಬಾರಿಯಾಗಲಿದೆ ಬಜೆಟ್ ಮಂಡಿಸಿರುವ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಈ ಬಾರಿಯ ಬಜೆಟ್'ನಲ್ಲಿ, ಚಿನ್ನ, ಬೆಳ್ಳಿ ಮತ್ತು ಪ್ಲಾಟಿನಂನಿಂದ ಮಾಡಿದ ಆಭರಣಗಳು ದುಬಾರಿ ಎಂದು ಘೋಷಿಸಲಾಯಿತು. ಮತ್ತೊಂದೆಡೆ, ಭಾರತೀಯ ಮಾರುಕಟ್ಟೆಯಲ್ಲೂ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿದುಬಾರಿಯಾಗಿದೆ. ಇಂದು ಬೆಳಗ್ಗೆ ಚಿನ್ನದ ದರದಲ್ಲಿ ಏರಿಕೆಯಾಗಿದ್ದು, ಇದೇ ವೇಳೆ ಬೆಳ್ಳಿ ದರದಲ್ಲಿ ಏರಿಕೆ ಕಂಡುಬಂದಿದೆ. 24 ಕ್ಯಾರೆಟ್ ನ 10 ಗ್ರಾಂ ಶುದ್ಧ ಚಿನ್ನ 57 ಸಾವಿರ ರೂ.ವಾಗಿದ್ದರೆ, 999 ಶುದ್ಧ ಬೆಳ್ಳಿಯ ಬೆಲೆ ಕೆಜಿಗೆ 58 ಸಾವಿರ ರೂಪಾಯಿ ಮೀರಿದೆ.