ಜಾತಿಗಳು ಸೃಷ್ಟಿಯಾಗಿರುವುದು ದೇವರಿಂದಲ್ಲ, ಪುರೋಹಿತರಿಂದ: ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್
Monday, February 6, 2023
ಮುಂಬೈ: ದೇಶದಲ್ಲಿ ಜಾತಿಗಳು ಸೃಷ್ಟಿಯಾಗಿರುವುದು ದೇವರಿಂದಲ್ಲ, ಪುರೋಹಿತರಿಂದ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ಮುಂಬೈನ ರವೀಂದ್ರ ನಾಟ್ಯ ಮಂದಿರದಲ್ಲಿ ಏರ್ಪಡಿಸಲಾಗಿದ್ದ ಸಂತ ಶಿರೋಮಣಿ ರೋಹಿದಾಸರ 647ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ನಮ್ಮನ್ನು ಸೃಷ್ಟಿಸಿರುವ ದೇವರಿಗೆ ನಾವೆಲ್ಲರೂ ಸಮಾನರು. ಯಾವುದೇ ಜಾತಿ, ಪಂಥ, ಮತಗಳನ್ನು ದೇವರು ಸೃಷ್ಟಿಸಿಲ್ಲ, ಈ ಎಲ್ಲವೂಗಳನ್ನು ಸೃಷ್ಟಿಸಿದ್ದು ಪುರೋಹಿತರು ಎಂದು ಹೇಳಿದರು.
ದೇಶದಲ್ಲಿ ಆತ್ಮಸಾಕ್ಷಿ ಹಾಗು ಪ್ರಜ್ಞೆ ಒಂದೇ ಆಗಿದ್ದು, ನಮ್ಮ ಮಧ್ಯೆ ಅಭಿಪ್ರಾಯಗಳು ಮಾತ್ರ ಭಿನ್ನವಾಗಿವೆ ಎಂದ ಮೋಹನ್ ಭಾಗವತ್, ನಮಗೆ ಕಾರ್ಮಿಕರ ಕೆಲಸದ ಬಗ್ಗೆ ಗೌರವ ಇಲ್ಲದಿರುವುದೇ ದೇಶದಲ್ಲಿ ನಿರುದ್ಯೋಗ ಸಮಸ್ಯೆಗೆ ಕಾರಣವಾಗುತ್ತೆ. ಎಲ್ಲಾ ಕೆಲಸಗಳನ್ನೂ ನಮ್ಮಿಂದ ಗೌರವಿಸುವ ಕೆಲಸ ಆಗಬೇಕು ಎಂದರು.