ಕ್ರಿಕೆಟ್ ಆಡುತ್ತಿದ್ದ ಮೈದಾನದಲ್ಲೇ ಹೃದಯಾಘಾತದಿಂದ ಸಾವನ್ನಪ್ಪಿದ ಕ್ರಿಕೆಟಿಗ! ವೀಡಿಯೊ ವೈರಲ್...

ಕ್ರಿಕೆಟ್ ಆಡುತ್ತಿದ್ದ ಮೈದಾನದಲ್ಲೇ ಹೃದಯಾಘಾತದಿಂದ ಸಾವನ್ನಪ್ಪಿದ ಕ್ರಿಕೆಟಿಗ! ವೀಡಿಯೊ ವೈರಲ್...

ಅಹಮದಾಬಾದ್: ಕ್ರಿಕೆಟ್ ಆಡುತ್ತಿದ್ದ ವೇಳೆ ಕ್ರಿಕೆಟಿಗನೊಬ್ಬ ಹೃದಯಾಘಾತ (ಹಾರ್ಟ್ ಅಟ್ಯಾಕ್‍)ದಿಂದ ಸಾವನ್ನಪ್ಪಿರುವ ಘಟನೆಯೊಂದು ಅಹಮದಾಬಾದ್‍ನಲ್ಲಿ ನಡೆದಿದೆ.

ಹೃದಯಾಘಾತದಿಂದ ಸಾವನ್ನಪ್ಪಿರುವ ಕ್ರಿಕೆಟಿಗನನ್ನು ವಸಂತ್ ರಾಥೋಡ್ (34) ಎಂದು ಗುರುತಿಸಲಾಗಿದೆ. ಮೃತ ವಸಂತ್ ರಾಥೋಡ್ ರಾಜ್ಯ ಸರಕು ಹಾಗೂ ಸೇವಾ ತೆರಿಗೆ ಇಲಾಖೆಯಲ್ಲಿ ಹಿರಿಯ ಗುಮಾಸ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದರು. 

ದಿನನಿತ್ಯ ಕ್ರಿಕೆಟ್ ಆಡುತ್ತಿದ್ದ ವಸಂತ್, ಕ್ರಿಕೆಟ್ ಆಡುತ್ತಿದ್ದ ವೇಳೆ ಬೌಲಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ ಆಯಾಸ ಉಂಟಾಗಿ ಅಲ್ಲಿಯೇ ಕುಸಿದರು. ಈ ವೇಳೆ ಮೈದಾನದಲ್ಲಿದ್ದ ಸಹಪಾಠಿಗಳು ನೀರು ಕುಡಿಸಿ ಕೂಡಲೇ ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋದರು. ಆಗಲೇ ಅಲ್ಲಿ ವಸಂತ್ ಅವರು ಸಾವನ್ನಪ್ಪಿದ್ದರು.

Ads on article

Advertise in articles 1

advertising articles 2

Advertise under the article