ಮನೆಯೊಳಗೆ ಬಂದ ಕಪ್ಪೆಯನ್ನು ಕೊಂದು ಸಾಂಬಾರು ಮಾಡಿದ ಅಪ್ಪ; ತಿಂದ ಬಾಲಕಿ ಸಾ#ವು
ಒಡಿಶಾ: ಮನೆಯೊಳಗೆ ಬಂದ ಕಪ್ಪೆಯನ್ನು ಸಾವಿಸಿ ಮಾಡಲಾಗಿದ್ದಾ ಸಾಂಬಾರನ್ನು ತಿಂದು ಬಾಲಕಿಯೊಬ್ಬಳು ಸಾ#ವನ್ನಪಿರುವ ಘಟನೆ ಒಡಿಸಾದ ಕಿಯೋಂಜಾರ್ ಜಿಲ್ಲೆಯಲ್ಲಿ ನಡೆದಿದೆ.
ಬುಡಕಟ್ಟು ಜನಾಂಗದ ಮನೆ ಯಜಮಾನ ಮನೆಗೆ ಬಂದಿದ್ದ ಕಪ್ಪೆಯನ್ನು ಕೊಂದು ಅದನ್ನು ಅಡುಗೆ ಮಾಡಿದ್ದಾನೆ. ಇದನ್ನು ತಿಂದ ಆತನ ಪುತ್ರಿ ಆರು ವರ್ಷದ ಸುಮಿತ್ರಾ ಮುಂಡಾ ಸಾ#ವನ್ನಪ್ಪಿದ್ದಾಳೆ. ಮತ್ತೊಬ್ಬಳು ಮಗಳು 4 ವರ್ಷದ ಮುನ್ನಿ ಎಂಬಾಕೆಯ ಸ್ಥಿತಿ ಚಿಂ#ತಾಜನಕವಾಗಿದೆ ಎನ್ನಲಾಗಿದೆ.
ಕಳೆದ ವಾರ 40 ವರ್ಷ ವಯಸ್ಸಿನ ಬುಡಕಟ್ಟು ಸಮುದಾಯದ ಮುಂಡಾ ಅವರ ಮನೆಗೆ ಕಪ್ಪೆಯೊಂದು ಬಂದಿದ್ದು, ಮನೆಯ ಯಜಮಾನ ಅದನ್ನು ಕೊಂದು ಅಡುಗೆ ಮಾಡಿದ್ದಾನೆ. ಅದನ್ನು ಕುಟುಂಬಸ್ಥರೆಲ್ಲ ಒಟ್ಟು ಸೇರಿ ತಿಂದಿದ್ದಾರೆ. ಸ್ವಲ್ಪ ಹೊತ್ತಿನ ಬಳಿಕ ಮನೆ ಮಂದಿಗೆಲ್ಲ ವಾಂ#ತಿಯಾಗಿ ಪ್ರಜ್ಞೆತಪ್ಪಿದರು. ಈ ವೇಳೆ ತೀವ್ರ ಅಸ್ವಸ್ಥಗೊಂಡ ಮಕ್ಕಳನ್ನು ಕಿಯೋಂಜಾರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಮುಂಡಾ ಅವರ ಆರು ವರ್ಷದ ಬಾಲಕಿ ಸುಮಿತ್ರಾ ಮೃ#ತಪಟ್ಟಿದ್ದಾಳೆ ಎಂದು ಹೇಳಲಾಗಿದೆ.