ಗುಜರಾತ್‌ನಲ್ಲಿ ಶೇ.51ಕ್ಕಿಂತ ಹೆಚ್ಚು ಮಹಿಳೆಯರು ಬಳಿ ಮೊಬೈಲ್ ಫೋನ್ ಇಲ್ಲ! 567ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಮೊಬೈಲ್ ಸಂಪರ್ಕವೇ ಇಲ್ಲ!
Thursday, February 16, 2023
ಅಹಮದಾಬಾದ್: ಎಲ್ಲದ್ದಕ್ಕೂ ರೋಲ್ ಮಾಡೆಲ್ ಎನ್ನುವ ಗುಜರಾತ್‌ನಲ್ಲಿ ಶೇ.51ಕ್ಕಿಂತ ಹೆಚ್ಚು ಮಹಿಳೆಯರು ಮೊಬೈಲ್ ಫೋನ್ ಹೊಂದಿಲ್ಲ ಎಂಬ ಮಾಹಿತಿ ಹೊರಬಿದ್ದಿದೆ.
ಗುಜರಾತ್‌ನಲ್ಲಿ ಒಟ್ಟು 18,425 ಹಳ್ಳಿಗಳಲ್ಲಿ 567ಕ್ಕೂ ಹೆಚ್ಚು ಹಳ್ಳಿಗಳು ಮೊಬೈಲ್ ಸಂಪರ್ಕವಿಲ್ಲದೆ ಉಳಿದಿವೆ. ಈಗ ರಾಷ್ಟ್ರವ್ಯಾಪಿ 5G ರೋಲ್‌ಔಟ್ ಆಗಿದ್ದರೂ, ಗುಜರಾತ್‌ನ 800ಕ್ಕೂ ಹೆಚ್ಚು ಹಳ್ಳಿಗಳು 4G ಸೇವೆಯನ್ನೇ ಹೊಂದಿಲ್ಲ ಎಂದು ರಾಜ್ಯದ ಖೇಡಾ ಸಂಸದ ಹಾಗು ಟೆಲಿಕಾಂ ರಾಜ್ಯ ಸಚಿವ ದೇವುಸಿಂಹ ಚೌಹಾಣ್ ಲೋಕಸಭೆಗೆ ಮಾಹಿತಿ ನೀಡಿದ್ದಾರೆ.
ಗುಜರಾತ್‌ನಲ್ಲಿ ಬುಡಕಟ್ಟು ಪ್ರಾಬಲ್ಯದ ಡ್ಯಾಂಗ್ ಜಿಲ್ಲೆಯಲ್ಲಿ ಮೊಬೈಲ್ ಸಂಪರ್ಕವನ್ನು ಹೊಂದಿರದ ಸರಿಸುಮಾರು 90 ಹಳ್ಳಿಗಳನ್ನು ಹೊಂದಿದೆ. ಕಚ್ ಹಾಗು ನರ್ಮದಾ ಜಿಲ್ಲೆಗಳಲ್ಲಿ ಕ್ರಮವಾಗಿ 84 ಮತ್ತು 64 ಗ್ರಾಮಗಳು ಸೇವೆಯನ್ನು ಹೊಂದಿಲ್ಲ ಎಂದು ದೂರಸಂಪರ್ಕ ವಲಯದ ತಜ್ಞ ವಿಶಾಲ್ ಜಾದವ್ ಹೇಳುತ್ತಾರೆ.