ದುಬೈನಲ್ಲಿ ‘ಒಕ್ಕಲಿಗ ಬಳಗ ಯುಎಇ’ ಉದ್ಘಾಟನೆ
Wednesday, February 15, 2023
ದುಬೈ(Headlines Kannada): ಯುಎಇ (ಸಂಯುಕ್ತ ಅರಬ್ ಒಕ್ಕೂಟ)ಯಲ್ಲಿ ‘ಒಕ್ಕಲಿಗರ ಬಳಗ ಯುಎಇ’ ಇದರ ಉದ್ಘಾಟನಾ ಸಮಾರಂಭವು ರವಿವಾರ ದುಬೈನ ಮಮ್ಜಾರ್ ಉದ್ಯಾನವನದಲ್ಲಿ ನಡೆಯಿತು.
ಒಕ್ಕಲಿಗ ಸಮುದಾಯದ ಆಚಾರ ವಿಚಾರ ಸಂಸ್ಕೃತಿಯನ್ನು ಯುಎಇ ಮಣ್ಣಲ್ಲೂ ಪಸರಿಸುವ ಉದ್ದೇಶದಿಂದ ಮತ್ತು ಸರ್ವ ಯುಎಇ ಒಕ್ಕಲಿಗ ಜನಾಂಗವನ್ನು ಒಂದುಗೂಡಿಸುವ ಸಲುವಾಗಿವಾಗಿ ‘ಒಕ್ಕಲಿಗರ ಬಳಗ ಯುಎಇ’ಯನ್ನು ರಚಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ಒಕ್ಕಲಿಗರ ಸಾಂಪ್ರದಾಯಿಕ ಶೈಲಿಯ ಉಡುಗೆ ಸೀರೆ ಮತ್ತು ಪಂಚೆಗಳನ್ನು ಧರಿಸಿ ಪಾಲ್ಗೊಂಡ ಒಕ್ಕಲಿಗ ಸಮುದಾಯದವರು ಎಲ್ಲರ ಜೊತೆಯಾದರು. ಅಲ್ಲದೇ ಮಧ್ಯಾಹ್ನ ಗೌಡರ ಶೈಲಿಯ ಬಾಡೂಟದ ಔತಟಕೂಟವನ್ನು ಆಯೋಜಿಸಲಾಗಿತ್ತು. ಅಲ್ಲದೇ ವಯಸ್ಕರು ಮತ್ತು ಮಕ್ಕಳಿಗಾಗಿ ವಿವಿಧ ಮನರಂಜನಾ ಕ್ರೀಡೆಗಳನ್ನು ಆಯೋಜಿಸಲಾಗಿತ್ತು.