ಬಿಜೆಪಿಯವರಂತೆ ಎಂದೂ ನ#ರಹ#ತ್ಯೆಯ ರಾಜಕೀಯ ಮಾಡಿಲ್ಲ: ಕುಮಾರಸ್ವಾಮಿ
ಧಾರವಾಡ: ಬಿಜೆಪಿ, ಅಮಿತ್ ಶಾ ವಿರುದ್ಧ ಹರಿಹಾಯ್ದಿರುವ ಜೆಡಿಎಸ್ ಮುಖಂಡ ಎಚ್.ಡಿ.ಕುಮಾರಸ್ವಾಮಿ, ಬಿಜೆಪಿಯವರಂತೆ ಎಂದೂ ನ#ರಹ#ತ್ಯೆಯ ರಾಜಕೀಯ ಮಾಡಿಲ್ಲ ಎಂದು ಕಿಡಿಕಾರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಸರಕಾರದ ವಿರುದ್ಧ ಜನ ರೊಚ್ಚಿಗೆದ್ದಿದ್ದಾರೆ. ಇಷ್ಟು ದಿನ ಏನೂ ಮಾಡದೇ ಚುನಾವಣೆಯ ಹಿನ್ನೆಲೆಯಲ್ಲಿ ಬೊಗಳೆ ಬಿಡುತ್ತಿದೆ. ಎಂದಿದ್ದಾರೆ.
ಜೆಡಿಎಸ್'ಗೆ ಅಧಿಕಾರ ಸಿಕ್ಕಾಗ ರಾಜ್ಯದ ಜನರು ಮತ್ತು ರೈತರ ಪರವಾಗಿ ಸದಾ ಧ್ವನಿ ಎತ್ತಿದೆ. ಭ್ರಷ್ಟ ಬಿಜೆಪಿಯವರಂತೆ ಎಂದೂ ನ#ರಹ#ತ್ಯೆಯ ರಾಜಕೀಯ ಮಾಡಿಲ್ಲ ಎಂದ ಎಚ್.ಡಿ.ಕುಮಾರಸ್ವಾಮಿ, ಈ ಬಾರಿ ರಾಜ್ಯ ಹಾಗೂ ದೇಶದಲ್ಲಿ ಜನರು ಏನು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಿ ಎಂದರು.
ಚುನಾವಣೆಯ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಬಂದು ಬರೀ ಭಾಷಣ ಬಿಗಿಯುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಕರ್ನಾಟಕಕ್ಕಾಗಲಿ, ಇಲ್ಲಿನ ಜನತೆಗಾಗಲಿ ಏನಾದರೂ ಕೊಡುಗೆ ನೀಡಿದ್ದಾರೆಯೇ? ಬಹಳ ಮುಖ್ಯವಾಗಿರುವ ಮಹದಾಯಿ ಸಮಸ್ಯೆ ಸರಿಪಡಿಸಿದ್ದಾರಾ? ರಾಜ್ಯಕ್ಕೆ ಏನಾದರೂ ಕೊಡುಗೆ ಕೊಟ್ಟಿದ್ದಾರಾ? ಎಂದು ಕುಮಾರಸ್ವಾಮಿ ಪ್ರಶ್ನೆಗಳ ಸುರಿಮಳೆಗರೆದರು.