![ರಾಜಕೀಯ ಪ್ರವೇಶದ ಬಗ್ಗೆ ಕೊನೆಗೂ ಮೌನ ಮುರಿದ ಕಿಚ್ಚ ಸುದೀಪ್ ಹೇಳಿದ್ದೇನು..? ರಾಜಕೀಯ ಪ್ರವೇಶದ ಬಗ್ಗೆ ಕೊನೆಗೂ ಮೌನ ಮುರಿದ ಕಿಚ್ಚ ಸುದೀಪ್ ಹೇಳಿದ್ದೇನು..?](https://blogger.googleusercontent.com/img/b/R29vZ2xl/AVvXsEiueyMl20WunX1TjY7e0uUvdt6VkozHaRmvEp-WuFg6r5j1-Ni84C5CLlZI7SdBETzc1fsGPlzPIe1vo_Kv-l_Vakf--8-FC3w955PAxaQQs-9oGRzyzSv0p69xYo8DVc92Ht4tZZSLXXRmk7ikENFGLnDfFNgaORyHtsPAEr9X2ZCjMx3gKXQayQDO7Q/w640-h480/dk-kiccha.jpg)
ರಾಜಕೀಯ ಪ್ರವೇಶದ ಬಗ್ಗೆ ಕೊನೆಗೂ ಮೌನ ಮುರಿದ ಕಿಚ್ಚ ಸುದೀಪ್ ಹೇಳಿದ್ದೇನು..?
Monday, February 13, 2023
ಬೆಂಗಳೂರು: ಇತ್ತೀಚಿಗೆ ನಟ ಕಿಚ್ಚ ಸುದೀಪ್ ಅವರನ್ನು ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಅವರು ಭೇಟಿಯಾಗಿದ್ದು, ಈ ವೇಳೆ ಸುದೀಪ್ ಕಾಂಗ್ರೆಸ್ ಸೇರಲಿದ್ದಾರೆ ಎಂಬ ಗುಸುಗುಸು ಕೇಳಿ ಬಂದಿತ್ತು. ಈ ಬಗ್ಗೆ ಕಿಚ್ಚ ಸುದೀಪ್ ಏನು ಹೇಳಿದ್ದಾರೆ ಮುಂದೆ ಓದಿ...
ರಾಜಕೀಯ ನಾಯಕರು ನನ್ನನ್ನು ಭೇಟಿ ಮಾಡಿ, ರಾಜಕೀಯಕ್ಕೆ ಬುಲಾವ್ ನೀಡಿದ್ದು ನಿಜ. ಆದರೆ ನಾನು ಈ ವರೆಗೆ ರಾಜಕೀಯಕ್ಕೆ ಹೋಗುವ ಕುರಿತು ನಿರ್ಧಾರಾ ಮಾಡಿಲ್ಲ ಎಂದು ಸುದೀಪ್ ಹೇಳಿದ್ದಾರೆ.
ಡಿಕೆ ಶಿವಕುಮಾರ್, ಸುಧಾಕರ್, ಬಸವರಾಜ ಬೊಮ್ಮಾಯಿ, ರಮ್ಯಾ ಅವರು ಭೀತಿಯಾಗಿದ್ದು, ಅವರೆಲ್ಲ ನನ್ನ ಸ್ನೇಹಿತರು. ನಾನು ಇನ್ನೂ ರಾಜಕೀಯಕ್ಕೆ ಹೋಗುವ ಬಗ್ಗೆ ನಿರ್ಧಾರ ತಗೊಂಡಿಲ್ಲ. ನನಗೆ ಎರಡೂ ಕಡೆ ಆಪ್ತರು ಇರುವಾಗ ನಿರ್ಧಾರ ತೆಗೆದುಕೊಳ್ಳುವುದು ಕಷ್ಟ ಆಗುತ್ತದೆ ಎಂದು ಕಿಚ್ಚ ಸುದೀಪ್ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.