ಬೆಂಗಳೂರಿನ ಯಲಹಂಕಾದ ವಾಯುನೆಲೆಯಲ್ಲಿ ನಡೆಯುತ್ತಿರುವ 14ನೇ ಏರೋ ಇಂಡಿಯಾ ಶೋಗೆ ಚಾಲನೆ ನೀಡಿದ ಪ್ರಧಾನಿ ಮೋದಿ
Monday, February 13, 2023
ಬೆಂಗಳೂರು: ಬೆಂಗಳೂರಿನ ಏರೋ ಇಂಡಿಯಾ ಶೋ ನವಭಾರತದ ಸಾಮರ್ಥ್ಯಕ್ಕೆ ಸಾಕ್ಷಿಯಾಗುತ್ತಿದ್ದು, ಈ ಮೂಲಕ ದೇಶವು ಇನ್ನಷ್ಟು ಎತ್ತರ ತಲುಪುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಬೆಂಗಳೂರು ಯಲಹಂಕಾದ ವಾಯುನೆಲೆಯಲ್ಲಿ ನಡೆಯುತ್ತಿರುವ 14ನೇ ಏರೋ ಇಂಡಿಯಾ ಶೋಗೆ ಸೋಮವಾರ ಚಾಲನೆ ನೀಡಿ ಪ್ರಧಾನಿ ನರೇಂದ್ರ ಮೋದಿ ಮಾತನಾಡುತ್ತಿದ್ದರು.
ಏರೋ ಇಂಡಿಯಾ ಶೋವನ್ನು ಒಂದು ಸಮಯದಲ್ಲಿ ಕೇವಲ ಪ್ರದರ್ಶನಕ್ಕೆ ಸೀಮಿತ ಎಂದು ಭಾವಿಸಲಾಗುತ್ತಿತ್ತು. ಕಳೆದ ಕೆಲ ವರ್ಷಗಳಿಂದ ಎಲ್ಲರ ದೃಷ್ಟಿಕೋನ ಬದಲಾಗಿದೆ. ನವಭಾರತದ ನವಮಾರ್ಗವನ್ನು ಈ ಏರೋ ಇಂಡಿಯಾ ಶೋ ಪ್ರತಿಫಲಿಸುತ್ತದೆ. ನಮಗೆ ಈವತ್ತು ಇದು ಕೇವಲ ಶೋ ಮಾತ್ರವಲ್ಲ ಭಾರತದ ಶಕ್ತಿಯೂ ಆಗಿದೆ ಎಂದರು.
ಇದೇ ವೇಳೆ ಏರೋ ಇಂಡಿಯಾ 2023ರ ಸಂಸ್ಮರಣಾ ಅಂಚೆಯನ್ನು ಪ್ರಧಾನಿಗಳು ಬಿಡುಗಡೆ ಮಾಡಿದರು. ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸಿಎಂ ಬಸವರಾಜ ಬೊಮ್ಮಾಯಿ, ರಾಜ್ಯಪಾಲರು ಉಪಸ್ಥಿತರಿದ್ದರು.