ಸಂಸತ್ತಿನಲ್ಲಿ ಮತ್ತೆ ಕೋಲಾಹಲಕ್ಕೆ ಕಾರಣವಾದ 'ಅದಾನಿ' ವಿವಾದ; ಮೋದಿ ವಿರುದ್ಧ ಗುಡುಗಿದ ಖರ್ಗೆ
ಹೊಸದಿಲ್ಲಿ: ಅದಾನಿ-ಮೋದಿ ಸರಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ಮುಂದುವರಿಸಿದ್ದು, ಇಂದು ಲೋಕಸಭೆ ಹಾಗೂ ರಾಜ್ಯಸಭೆ ಎರಡೂ ಕಡೆ ಕಲಾಪ ಕೋಲಾಹಲಕ್ಕೆ ಸಾಕ್ಷಿಯಾಗಿದೆ.
ಕಾಂಗ್ರೆಸ್ ಅಧ್ಯಕ್ಷ ಹಾಗೂ ರಾಜ್ಯಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಅದಾನಿ ಸಮೂಹ- ಹಿಂಡನ್‌ಬರ್ಗ್ ವರದಿಯ ವಿಚಾರವನ್ನಿಟ್ಟುಕೊಂಡು ಮೋದಿ ಸರಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
2014ರಲ್ಲಿ ನಾನು ತಿನ್ನೋದಿಲ್ಲ, ತಿನ್ನೋಕೂ ಬಿಡಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದು, ಈಗ ಕೆಲ ಉದ್ಯಮಿಗಳಿಗೆ ತಿನ್ನೋಕೆ ಯಾಕೆ ಬಿಟ್ಟಿದ್ದಾರೆ? ಎಂದು ಮೋದಿ ವಿರುದ್ಧ ಹರಿಹಾಯ್ದರು.
ಈ ಬಾರಿಯ ಬಜೆಟ್ ಮಂಡನೆಗೂ ಮುನ್ನ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಾಡಿದ ಭಾಷಣಕ್ಕೆ ಪ್ರತಿಕ್ರಿಯೆ ನೀಡಿದ ಮಲ್ಲಿಕಾರ್ಜುನ ಖರ್ಗೆ, ದೇಶದಲ್ಲಿನ ಪ್ರತಿ ವಿಷಯಕ್ಕೂ ಕೋಮು ಬಣ್ಣ ಬಳಿಯಲಾಗುತ್ತಿದೆ. ಹಿಂದೂ-ಮುಸಲ್ಮಾನರ ಮಧ್ಯೆ ಬೆಂ#ಕಿ ಹಚ್ಚುವ ಕೆಲಸ ನಡೆಯುತ್ತಿದ್ದರೂ ಸರಕಾರ ಮಾತ್ರ ಮೌನವಾಗಿದೆ ಎಂದು ಆರೋಪಿಸಿದರು.
ದೇಶದ ಜವಾಬ್ದಾರಿಯುತ ಸಚಿವರು, ಸಂಸದರು ಹಿಂದೂ- ಮುಸ್ಲಿಂ ವಿಚಾರ ವಿವಾದ ಸೃಷ್ಟಿಸುತ್ತಿದ್ದು, ಅವರಿಗೆ ಬೇರೆ ಯಾವುದೇ ವಿಷಯ ಸಿಕ್ಕುವುದಿಲ್ಲವೇ? ಎಂದೂ ಪ್ರಶ್ನಿಸಿದ ಖರ್ಗೆ, ಪರಿಶಿಷ್ಟ ಜಾತಿಯವರು ದೇವಸ್ಥಾನ ಪ್ರವೇಶಿಸುವಂತಿಲ್ಲ, ಪ್ರವೇಶಿಸಿದಕ್ಕೆ ಹ#ಲ್ಲೆ ಮಾಡಲಾಗುತ್ತಿದೆ. ಅವರನ್ನು ಈ ದೇಶದ ಜನ ಹಿಂದೂ ಎಂದು ಪರಿಗಣಿಸಿದ್ದರೆ, ಎಸ್‌ಸಿಗಳಿಗೆ ದೇವಾಲಯ ಪ್ರವೇಶಿಸಲು ಏಕೆ ಅವಕಾಶ ನೀಡುತ್ತಿಲ್ಲ ಅಥವಾ ಅವರಿಗೆ ಸುಶಿಕ್ಷಿತರಾಗಲು ಏಕೆ ಬಿಡುತ್ತಿಲ್ಲ? ದಲಿತರ ಮನೆಗಳಲ್ಲಿ ಊಟ ಮಾಡುವ ಫೋಟೋಗಳೊಂದಿಗೆ ಅನೇಕ ಸಚಿವರು ಶೋ ಆಫ್ ಮಾಡುತ್ತಿದ್ದಾರೆ ಎಂದು ಟೀಕಾಪ್ರಹಾರ ನಡೆಸಿದರು.
ದೇಶದಲ್ಲಿ ಅಲ್ಪಸಂಖ್ಯಾತರ ಮೇಲೆ ಹ#ಲ್ಲೆ, ದೌ#ರ್ಜನ್ಯ ನಡೆಯುತ್ತಿದೆ. ಈ ಬಗ್ಗೆ ರಾಷ್ಟ್ರಪತಿಯವರು ಮಾತನಾಡಲು ತಮ್ಮ ಭಾಷಣ ಬಳಸುತ್ತಾರೆ ಎಂದು ನಾನು ಆಶಿಸಿದ್ದೆ. ಆದರೆ ಅವರ ಭಾಷಣ ಬಹಳ ನಿರಾಶೆಯಾಗಿದೆ ಎಂದ ಅವರು, ಕೇಂದ್ರ ಸರ್ಕಾರ ಏನು ಹೇಳುತ್ತದೆಯೋ ಅದನ್ನೇ ರಾಷ್ಟ್ರಪತಿ ಮತ್ತು ರಾಜ್ಯಪಾಲರು ಪುನರುಚ್ಛರಿಸುತ್ತಾರೆ ಎಂದರು.
ಇಲ್ಲಿ ನಾನು ಸತ್ಯ ಹೇಳಿದರೆ, ಅದು ದೇಶ ವಿ#ರೋಧಿಯೇ? ನಾನು ದೇಶದ್ರೋ#ಹಿ ಅಲ್ಲ, ಇಲ್ಲಿರುವ ಎಲ್ಲರಿಗಿಂತಲೂ ನಾನು ದೊಡ್ಡ ದೇ#ಶಭಕ್ತ ಎಂದ ಖರ್ಗೆ, ನೀವು ದೇಶವನ್ನು ಲೂಟಿ ಮಾಡುತ್ತಿದ್ದೀರಿ ಮತ್ತು ನನ್ನನ್ನ ದೇಶ ವಿರೋಧಿ ಎಂದು ಕರೆಯುತ್ತಿದ್ದೀರಿ ಎಂದೂ ವಾಗ್ದಾಳಿ ನಡೆಸಿದರು.
ಅದಾನಿಯ ಹೆಸರು ಹೇಳದೆ ಆಕ್ರೋಶ ಹೊರ ಹಾಕಿದ ಖರ್ಗೆ, ಪ್ರಧಾನಿ ಮೋದಿ ಅವರ ಅತಿ ಆಪ್ತ ಸ್ನೇಹಿತರೊಬ್ಬರ ಸಂಪತ್ತು 2.5 ವರ್ಷಗಳಲ್ಲಿ 13 ಪಟ್ಟು ಹೆಚ್ಚಳವಾಗಿದೆ. 2014ರಲ್ಲಿ ಅದು 50,000 ಕೋಟಿ ರೂ ಇದ್ದರೆ, 2019ರಲ್ಲಿ 1 ಲಕ್ಷ ಕೋಟಿ ರೂ ಹೆಚ್ಚಳವಾಗಿದೆ. 2 ವರ್ಷಗಳ ಸಂಪತ್ತಿನಲ್ಲಿ 12 ಲಕ್ಷ ಕೋಟಿ ರೂ ಬರುವಂತಹ ಮ್ಯಾಜಿಕ್ ಏನು ನಡೆದಿರಬಹುದು? ಇದು ಸ್ನೇಹದ ಪ್ರತಿಫಲವೇ? ಎಂದು ವ್ಯಂಗ್ಯವಾಗಿ ಪ್ರಶ್ನಿಸಿದರು.