ರಾಜ್ಯದಲ್ಲಿ ನ#ರಹಂ#ತಕ ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ; ಕ್ಷೇತ್ರವಿಲ್ಲದೆ ಒದ್ದಾಟ: ನಳೀನ್​ ಕುಮಾರ್​ ಕಟೀಲ್ ಆಕ್ರೋಶ

ರಾಜ್ಯದಲ್ಲಿ ನ#ರಹಂ#ತಕ ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ; ಕ್ಷೇತ್ರವಿಲ್ಲದೆ ಒದ್ದಾಟ: ನಳೀನ್​ ಕುಮಾರ್​ ಕಟೀಲ್ ಆಕ್ರೋಶ

ಕಾರವಾರ: ರಾಜ್ಯದಲ್ಲಿ ನ#ರಹಂ#ತಕ ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ ಅವರಿಗೆ ಈ ಬಾರಿ ಸ್ಪರ್ಧಿಸಲು ಕ್ಷೇತ್ರವಿಲ್ಲದೆ ಒದ್ದಾಡುತ್ತಿದ್ದಾರೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್​ ಕುಮಾರ್​ ಕಟೀಲ್​​ ಹೇಳಿದ್ದಾರೆ.

ಕಾರವಾರದಲ್ಲಿ ಇಂದು ನಡೆದ ಬಿಜೆಪಿ ಅಭಿಯಾನ, ಮತಗಟ್ಟೆ ಪೇಜ್ ಪ್ರಮುಖರ ಸಮಾವೇಶ ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ಸಿದ್ದರಾಮಯ್ಯರನ್ನು ಬಾದಾಮಿ ಕ್ಷೇತ್ರದ ಜನರು ಓಡಿಸಿದ್ದಾರೆ. ಈ ಕಡೆ ಕೋಲಾರ ಕ್ಷೇತ್ರದ ಜನರು ಸಿದ್ದರಾಮಯ್ಯರನ್ನು ಜಾಡಿಸಿದ್ದು, ವರುಣಾ ಕ್ಷೇತ್ರದ ಜನ ಬರಬೇಡಿ ಅಂತ ಕಲ್ಲು ಹಿಡಿದು ನಿಂತಿದ್ದಾರೆ ಎಂದು ಕಿಡಿಕಾರಿದರು.

ನ#ರಹಂ#ತಕ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ  24 ಹಿಂದೂ ಕಾರ್ಯಕರ್ತರ ಹ#ತ್ಯೆಯಾದರೂ ಅವರಿಗೆ ಕಣ್ಣೀರು ಬರಲಿಲ್ಲ. PFIಗೆ ಬೆಂಬಲ ನೀಡಿ ಹಿಂದೂಗಳ ಕೊ#ಲೆಗೆ ಕಾರಣವಾದ ಸಿದ್ದರಾಮಯ್ಯರ ಕಾಲದಲ್ಲಿ 3,000 ರೈತರು ಆ#ತ್ಮಹ#ತ್ಯೆಗೆ ಶರಣಾದರು ಎಂದ ಕಟೀಲ್, ರಾಜ್ಯದಲ್ಲಿ ಕಾಂಗ್ರೆಸ್‌ನಿಂದಲೇ ಭ#ಯೋತ್ಪಾದನೆ ಪ್ರಾರಂಭವಾಗಿದ್ದು, ಕಾಂಗ್ರೆಸ್ ಉ#ಗ್ರ ಪಕ್ಷ ಎಂದು ಆರೋಪ ಮಾಡಿದರು.

ಇದೇ ವೇಳೆ ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ ಕಟೀಲ್, ಕಣ್ಣೀರು ಹಾಕುವ ಮುಖ್ಯಮಂತ್ರಿ ಆಗಿದ್ದ ಹೆಚ್.ಡಿ.ಕುಮಾರಸ್ವಾಮಿ, ತಾಜ್ ಹೋಟೆಲ್‌ನಲ್ಲಿ ಕುಳಿತುಕೊಂಡು ಆಡಳಿತ ನಡೆಸಿದ್ದರಿಂದ ಅವರಿಗೆ ಜನರ ಕಷ್ಟ ಅರ್ಥ ಆಗಲಿಲ್ಲ ಎಂದರು.

Ads on article

Advertise in articles 1

advertising articles 2

Advertise under the article