ಮದುವೆಗೆ ಹಳೆಯ ಪೀಠೋಪಕರಣಗಳನ್ನು ನೀಡಿದರೆಂಬ ಕಾರಣಕ್ಕೆ ಮದುವೆಯನ್ನೇ ರದ್ದುಗೊಳಿಸಿದ ಮದುಮಗ!

ಮದುವೆಗೆ ಹಳೆಯ ಪೀಠೋಪಕರಣಗಳನ್ನು ನೀಡಿದರೆಂಬ ಕಾರಣಕ್ಕೆ ಮದುವೆಯನ್ನೇ ರದ್ದುಗೊಳಿಸಿದ ಮದುಮಗ!

ಹೈದರಾಬಾದ್: ಮದುವೆ ಎಂಬುದು ಯಾವೆಲ್ಲ ಕಾರಣಗಳಿಗೆ ಮುರಿದು ಬೀಳುತ್ತೆ ಎಂಬುದನ್ನು ನೀವು ನೋಡಿರಬಹುದು. ಆದರೆ ವರದಕ್ಷಿಣೆಯಾಗಿ "ಹಳೆಯ" ಪೀಠೋಪಕರಣಗಳನ್ನು ನೀಡಿದರೆಂಬ ಕಾರಣಕ್ಕೆ ಇಲ್ಲೊಂದು ಮದುವೆ ಮುರಿದು ಬಿದ್ದಿದೆ.

ಈ ಘಟನೆ ನಡೆದಿರುವುದು ಹೈದರಾಬಾದ್ ನಲ್ಲಿ. ವಧುವಿನ ಮನೆಯವರು ವರದಕ್ಷಿಣೆ ರೂಪದಲ್ಲಿ ನೀಡಿದ "ಹಳೆಯ" ಪೀಠೋಪಕರಣಗಳನ್ನು ಬೇಡ ಎಂದ ವರ ಮದುವೆಯನ್ನೇ ರದ್ದುಗೊಳಿಸಿದ್ದಾನೆ.

ರವಿವಾರ ನಡೆಯಬೇಕಿದ್ದ ಮದುವೆಗೆ ವರನ ಕಡೆಯವರು ಬಾರದ ಹಿನ್ನೆಲೆಯಲ್ಲಿ ವಧುವಿನ ತಂದೆ ದೂರು ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವಧುವಿನ ತಂದೆ, ನಾವು ಈ ಬಗ್ಗೆ ಮಾತನಾಡಲು ವರನ ಮನೆಗೆ ಹೋದಾಗ ವರನ ಪೋಷಕರು ನಮ್ಮೊಂದಿಗೆ ಅನುಚಿತವಾಗಿ ವರ್ತಿಸಿದರು. ಅವರು ಬೇಡಿಕೆ ಇಟ್ಟಿದ್ದ ಸಾಮಾನುಗಳನ್ನು ನೀಡಿಲ್ಲ ಹಾಗು ಪೀಠೋಪಕರಣಗಳು ಹಳೆಯದಾಗಿವೆ ಎಂದು ಅವರು ಹೇಳಿದ್ದಾರೆ ಎಂದು ದೂರಿದ್ದಾರೆ.

ಮದುವೆ ಔತಣಕೂಟಕ್ಕೆ ಬೇಕಾದ ಎಲ್ಲ ವ್ಯವಸ್ಥೆಯನ್ನು ತಾನು ಮಾಡಿದ್ದು, ಸಂಬಂಧಿಕರು ಮತ್ತು ಅತಿಥಿಗಳನ್ನು ಆಹ್ವಾನಿಸಿದ್ದೆ. ಆದರೆ ಮದುವೆ ಮಂಟಪಕ್ಕೆ ವರ ಬರಲಿಲ್ಲ ಎಂದು ವಧುವಿನ ತಂದೆ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಮದ್ವೇಗೆ ವರನ ಕುಟುಂಬದವರು ವರದಕ್ಷಿಣೆಯಾಗಿ ಇತರ ವಸ್ತುಗಳ ಜೊತೆಗೆ ಪೀಠೋಪಕರಣಗಳನ್ನು ನಿರೀಕ್ಷಿಸಿದ್ದರು. ಆದರೆ ಬಳಸಿದ ಪೀಠೋಪಕರಣಗಳನ್ನು ವಧುವಿನ ಮನೆಯವರು ನೀಡಿದ್ದರಿಂದ ಕೋಪಗೊಂಡು ವರನ ಮನೆಯವರು ಅದನ್ನು ತಿರಸ್ಕರಿಸಿ, ಮದುವೆಯನ್ನು ಮುರಿದಿದ್ದಾರೆ ಎಂದು ನೀಡಿದ ದೂರಿನ ಆಧಾರದ ಮೇಲೆ ಕೇಸ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article