ಕೇವಲ ಒಂದೇ ತಿಂಗಳಲ್ಲಿ 9.91 ಲಕ್ಷ ಕೋಟಿ ಇದ್ದ ಅದಾನಿ ಸಂಪತ್ತು 5 ಲಕ್ಷ ಕೋಟಿಗೆ ಇಳಿಕೆ!

ಕೇವಲ ಒಂದೇ ತಿಂಗಳಲ್ಲಿ 9.91 ಲಕ್ಷ ಕೋಟಿ ಇದ್ದ ಅದಾನಿ ಸಂಪತ್ತು 5 ಲಕ್ಷ ಕೋಟಿಗೆ ಇಳಿಕೆ!

ನವದೆಹಲಿ: ಇತ್ತೀಚಿಗೆ ಹಿಂಡೆನ್‌ಬರ್ಗ್ ವರದಿ ಪ್ರಕಟಿಸಿದ ಬಳಿಕ ಉದ್ಯಮಿ ಗೌತಮ್ ಅದಾನಿ ಕಂಪನಿಗಳ ಷೇರುಗಳಲ್ಲಿ ಭಾರೀ ಕುಸಿತ ಕಂಡಿದ್ದು, ಅವರ ಸಂಪತ್ತಿನ ಮೌಲ್ಯ 5,000 ಕೋಟಿ ಡಾಲರ್(ಸುಮಾರು 4 ಲಕ್ಷ ಕೋಟಿ ರೂ.) ಕಡಿಮೆಯಾಗಿದೆ ಎಂದು ವರದಿಯೊಂದು ಹೇಳಿದೆ.

ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್‌ನಲ್ಲಿ ನವೀಕರಿಸಿದ ಡೇಟಾದ ಪ್ರಕಾರ ಗೌತಮ್ ಅದಾನಿ ಒಟ್ಟು ಸಂಪತ್ತು ಈಗ 49.1 ಬಿಲಿಯನ್ ಡಾಲರ್ (ಸುಮಾರು 4 ಲಕ್ಷ ಕೋಟಿ ರೂ.) ಆಗಿದೆ.

1 ತಿಂಗಳ ಹಿಂದೆ ಗೌತಮ್ ಅದಾನಿ ಒಟ್ಟು ಸಂಪತ್ತಿನ ಮೌಲ್ಯ ಸುಮಾರು 120 ಶತಕೋಟಿ ಡಾಲರ್ (ಸುಮಾರು 9.91 ಲಕ್ಷ ಕೋಟಿ ರೂ.) ನಷ್ಟಿತ್ತು. ಈ ಮೂಲಕ ಅವರು ವಿಶ್ವದ 3ನೇ ಶ್ರೀಮಂತ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಹಿಂಡೆನ್‌ಬರ್ಗ್ ವರದಿ ಬಳಿಕ ಏಕಾಏಕಿ ಷೇರುಗಳ ಕುಸಿತದಿಂದಾಗಿ ದೊಡ್ಡ ಪ್ರಮಾಣದ ಸಂಪತ್ತನ್ನು ಅದಾನಿ ಕಳೆದುಕೊಂಡಿದ್ದಾರೆ.

Ads on article

Advertise in articles 1

advertising articles 2

Advertise under the article