ಕಡಬದ ರೆಂಜಿಲಾಡಿಯಲ್ಲಿ ಕಾಡಾನೆ ದಾ#ಳಿಗೆ ಸಾ#ವನ್ನಪ್ಪಿದ್ದ ಇಬ್ಬರ ಕುಟುಂಬಕ್ಕೆ ತಲಾ 15 ಲಕ್ಷ ರೂ. ಪರಿಹಾರ ಘೋಷಣೆ

ಕಡಬದ ರೆಂಜಿಲಾಡಿಯಲ್ಲಿ ಕಾಡಾನೆ ದಾ#ಳಿಗೆ ಸಾ#ವನ್ನಪ್ಪಿದ್ದ ಇಬ್ಬರ ಕುಟುಂಬಕ್ಕೆ ತಲಾ 15 ಲಕ್ಷ ರೂ. ಪರಿಹಾರ ಘೋಷಣೆ

ಮಂಗಳೂರು: ಸೋಮವಾರ ನಡೆದ ಕಾಡಾನೆ ದಾ#ಳಿಯಿಂದ ಮೃ#ತಪಟ್ಟ ಕಡಬದ ಇಬ್ಬರ ಕುಟುಂಬಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ತಲಾ 15 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದಾರೆ.

ಕಡಬ ತಾಲೂಕಿನ ರೆಂಜಿಲಾಡಿಯಲ್ಲಿ ಕಾಡಾನೆಯೊಂದು ಏಕಾಏಕಿ ದಾ#ಳಿ ನಡೆಸಿ, ರಂಜಿತಾ (21) ಹಾಗೂ ಆಕೆಯ ರಕ್ಷಣೆಗೆ ಧಾವಿಸಿದ್ದ ರಮೇಶ್ ರೈ ಅವರನ್ನು ಕೊಂ#ದು ಹಾಕಿತ್ತು. 

ಇಲ್ಲಿನ ಪೇರಡ್ಕ ಹಾಲು ಸೊಸೈಟಿಗೆ ಕೆಲಸಕ್ಕೆಂದು ನಡೆದುಕೊಂಡು ತೆರಳುತ್ತಿದ್ದ ಯುವತಿ ರಂಜಿತಾ ಹಾಗೂ ಆಕೆಯ ರಕ್ಷಣೆಗೆ ಧಾವಿಸಿದ್ದ ರಮೇಶ್ ರೈ ಇಬ್ಬರ ಮೇಲೂ ಕಾಡಾನೆ ದಾ#ಳಿ ನಡೆದಿದೆ ಪರಿಣಾಮ ರಮೇಶ್ ರೈ ಸ್ಥಳದಲ್ಲೇ ಸಾ#ವನ್ನಪ್ಪಿದ್ದರೆ, ಗಂ#ಭೀರ ಸ್ಥಿತಿಯಲ್ಲಿದ್ದ ರಂಜಿತಾ ನೆಲ್ಯಾಡಿ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಕೊ#ನೆಯುಸಿರೆಳೆದಿದ್ದಳು. ಈ ವೇಳೆ ಸ್ಥಳೀಯರು ಇಬ್ಬರ ಶ#ವಗಳನ್ನು ರಸ್ತೆಯಲ್ಲಿಟ್ಟು ಅರಣ್ಯಾಧಿಕಾರಿಗಳ  ವಿರುದ್ಧ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದರು.

ಘಟನಾ ಸ್ಥಳಕ್ಕೆ ತೆರಳಿದ್ದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರವಿಕುಮಾರ್ ಪ್ರತಿಭಟನಾಕಾರರನ್ನ ಸಮಾಧಾನಪಡಿಸಿದ್ದರು. ಮೃ#ತರ ಕುಟುಂಬಗಳಿಗೆ ತಲಾ 15 ಲಕ್ಷ ಪರಿಹಾರ ಹಾಗು ಯುವತಿಯ ಸಹೋದರಿಗೆ ಕೆಲಸ ಕೊಡಿಸುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದರು.

Ads on article

Advertise in articles 1

advertising articles 2

Advertise under the article