ಒಂದು ಸಿದ್ಧಾಂತ, ಓರ್ವ ವ್ಯಕ್ತಿಯಿಂದಲೋ, ಒಂದು ಗುಂಪಿನಿಂದಲೋ ದೇಶವನ್ನು ಕಟ್ಟಲು ಸಾಧ್ಯವಿಲ್ಲ: RSS ಮುಖ್ಯಸ್ಥ ಮೋಹನ್ ಭಾಗವತ್
Thursday, February 16, 2023
ಮುಂಬೈ: ನಮ್ಮಲ್ಲಿರುವ ಯಾವುದೇ ಒಂದು ಸಿದ್ಧಾಂತದಿಂದಲೋ, ಓರ್ವ ವ್ಯಕ್ತಿಯಿಂದಲೋ ಅಥವಾ ಒಂದು ಗುಂಪಿನಿಂದ ದೇಶವನ್ನು ಕಟ್ಟಲು ಸಾಧ್ಯವಿಲ್ಲ. ಅದೇ ರೀತಿ ಒಡೆಯಲು ಕೂಡ ಸಾಧ್ಯವಿಲ್ಲ ಎಂದು RSS ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ನಾಗ್ಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮೋಹನ್ ಭಾಗವತ್, ಜಗತ್ತಿನ ಅಭಿವೃದ್ಧಿಶೀಲ ದೇಶಗಳು ವಿವಿಧ ಬಗೆಯ ವಿಚಾರಗಳು, ಬಹು ವ್ಯವಸ್ಥೆಗಳಿಂದಲೇ ನಿರ್ಮಿತವಾದವುಗಳಾಗಿವೆ. ಇಂತಹ ವಿವಿಧತೆಯಿಂದ ಅವು ಇಂದು ಅಭಿವೃದ್ಧಿ ಹೊಂದುತ್ತಿವೆ ಎಂದರು.
ಈ ಮಧ್ಯೆ ಇತ್ತೀಚಿಗೆ ಮೋಹನ್ ಭಾಗವತ್ ಅವರು ನೀಡುತ್ತಿರುವ ವಿವಿಧ ಹೇಳಿಕೆಗಳು ಕೇಂದ್ರ ಬಿಜೆಪಿ ಸರ್ಕಾರದ ನೀತಿಗಳಿಗೆ ವಿರುದ್ಧವಾಗಿರುವಂತೆ ಭಾಸವಾಗುತ್ತಿದ್ದು, ಈ ಹೇಳಿಕೆ ಕೂಡಾ ಚರ್ಚೆಗೆ ಗ್ರಾಸವಾಗಿದೆ.