ಟಿಪ್ಪುವಿನಂತೆ ಸಿದ್ದರಾಮಯ್ಯರನ್ನು ಹೊ#ಡೆದು ಹಾಕಿ; ಸಚಿವ ಅಶ್ವಥ್ ನಾರಾಯಣ್ ಹೇಳಿಕೆಗೆ ಯತ್ನಾಳ್-ಸಿ.ಟಿ.ರವಿ ಹೇಳಿದ್ದೇನು..?

ಟಿಪ್ಪುವಿನಂತೆ ಸಿದ್ದರಾಮಯ್ಯರನ್ನು ಹೊ#ಡೆದು ಹಾಕಿ; ಸಚಿವ ಅಶ್ವಥ್ ನಾರಾಯಣ್ ಹೇಳಿಕೆಗೆ ಯತ್ನಾಳ್-ಸಿ.ಟಿ.ರವಿ ಹೇಳಿದ್ದೇನು..?

ಬೆಂಗಳೂರು: ಟಿಪ್ಪುವನ್ನು ಹೊಡೆದು ಹಾಕಿದಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಹೊ#ಡೆದು ಹಾಕಬೇಕು ಎಂಬ ಸಚಿವ ಅಶ್ವಥ್ ನಾರಾಯಣ್ ಹೇಳಿಕೆಯನ್ನು ಸ್ವಪಕ್ಷ ಬಿಜೆಪಿ ನಾಯಕರಾದ ಬಸನಗೌಡ ಪಾಟೀಲ್ ಯತ್ನಾಳ್, ಸಿ.ಟಿ.ರವಿ ಖಂಡಿಸಿದ್ದಾರೆ.

ರಾಜ್ಯದಲ್ಲಿ ರಾಜಕೀಯದಲ್ಲಿ ಟೀಕೆಗಳು ಸಹಜ, ಆದರೆ ಇಂತಹ ಹೇಳಿಕೆಯನ್ನು ನಾವು ಒಪ್ಪಲಾಗುವುದಿಲ್ಲ, ಈ ರೀತಿ ಯಾವ ರಾಜಕಾರಣಿಯೂ ಹೇಳಬಾರದು. ಈ ರೀತಿಯ ನಡವಳಿಕೆಗಳು ರಾಜಕಾರಣಕ್ಕೆ ಶೋಭೆ ತರುವುದಿಲ್ಲ ಎಂದು ಯತ್ನಾಳ್ಸೈ ಹೇಳಿದ್ದಾರೆ.

ರಾಜಕೀಯದಲ್ಲಿ ಸೈದ್ಧಾಂತಿಕವಾಗಿ ವ್ಯಕ್ತಿಯನ್ನು ಎದುರಿಸಬೇಕು. ಅವರ ಸಿದ್ಧಾಂತಗಳನ್ನು ಟೀಕಿಸುವ ಮೂಲಕ ವಿರೋಧ ವ್ಯಕ್ತಪಡಿಸಬೇಕು. ಅದರಾಚೆ ವೈಯಕ್ತಿಕವಾಗಿ ಇಂತಹ ಮಾತವುಗಳನ್ನು ಯಾರು ಕೂಡಾ ಆಡಬಾರದು ಎಂದಿದ್ದಾರೆ. 

ಸಚಿವ ಅಶ್ವಥ್ ನಾರಾಯಣ್ ಯಾವ ಹಿನ್ನೆಲೆಯಲ್ಲಿ ಈ ರೀತಿ ಹೇಳಿದ್ದಾರೆ ಎಂದು ಗೊತ್ತಿಲ್ಲ, ಆದರೆ ರಾಜಕೀಯದಲ್ಲಿ ಇಂಥ ಹೇಳಿಕೆ, ಮಾತುಗಳನ್ನು ಆಡುವುದು ಸರಿಯಲ್ಲ. ಇದನ್ನು ತಾನು ಸಮರ್ಥನೆ ಕೂಡಾ ಮಾಡಲ್ಲ ಎಂದು ಸಿ.ಟಿ.ರವಿ ಕೂಡ ವಿರೋಧ ವ್ಯಕ್ತಪಡಿಸಿದರು.

Ads on article

Advertise in articles 1

advertising articles 2

Advertise under the article