ಅಶ್ವತ್ಥ ನಾರಾಯಣ ಬಿಜೆಪಿಯ ಮೀರ್ ಸಾದಿಕ್ ವಂಶಸ್ಥರು: ಯು. ಟಿ ಖಾದರ್ ವಾಗ್ದಾಳಿ
ಬೆಂಗಳೂರು: ಟಿಪ್ಪು ರೀತಿಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯರನ್ನು ಹೊ#ಡೆಯಬೇಕು ಎಂಬ ಸಚಿವ ಅಶ್ವತ್ಥ ನಾರಾಯಣ ಹೇಳಿಕೆಗೆ ಕಿಡಿಕಾರಿರುವ ಪ್ರತಿಪಕ್ಷದ ಉಪನಾಯಕ ಯು. ಟಿ ಖಾದರ್, ಅಶ್ವತ್ಥ ನಾರಾಯಣ ಬಿಜೆಪಿಯ ಮೀರ್ ಸಾದಿಕ್ ವಂಶಸ್ಥರು ಎಂದು ವಾಗ್ದಾಳಿ ನಡೆಸಿದ್ದಾರೆ.
ವಿಧಾನಸೌಧದಲ್ಲಿ ಗುರುವಾರ ಮಾತನಾಡಿದ ಅವರು, ರಾಜಕೀಯದಲ್ಲಿ ನೇರಾ ನೇರವಾಗಿ ಹೋರಾಟ ಮಾಡುವ ಹಾಗೂ ಚರ್ಚೆ ಮಾಡುವ ಧೈರ್ಯ, ಎದೆಗಾರಿಕೆ ಇವರಿಗೆ ಇಲ್ಲ. ಅಹಿಂಸಾವಾದಕ ಗಾಂಧೀಜಿಯನ್ನು ಕೊಂ#ದವರಿಂದ ನಾವು ಇನ್ನೇನು ನಿರೀಕ್ಷಿಸಲು ಸಾಧ್ಯ. ಗಾಂಧಿಯನ್ನು ಕೊಂ#ದ ಗೋ#ಡ್ಸೆ ವಂಶಸ್ಥರು ಅಶ್ವತ್ಥ ನಾರಾಯಣ. ಇವರು ನಮ್ಮನ್ನೆಲ್ಲ ಹೊ#ಡೆದುಹಾಕಲು ನೋಡಿದರೆ, ಮುಂದೆ ಕಾಂಗ್ರೆಸ್ ನಾಯಕರನ್ನು ಜನರೇ ಮೂರನೇ ಮಹಡಿಗೆ ತಂದು ಕೂರಿಸ್ತಾರೆ. ರಾಜ್ಯದ ಜನರೇ ಇವರಿಗೆ ತಕ್ಕ ಉತ್ತರವನ್ನೂ ಕೊಡ್ತಾರೆ ಎಂದರು.
ಸಚಿವ ಅಶ್ವತ್ಥ ನಾರಾಯಣ ಹೇಳಿಯೇಕೆಯನ್ನು ಖಂಡಿಸಿರುವ ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೆವಾಲ, ಈ ಬಾರಿಯ ಚುನಾವಣೆಯಲ್ಲಿ ಸೋಲುವ ಭಯ, ಆ#ತಂಕದಿಂದ ಇಂಥ ಹೇಳಿಕೆ ನೀಡುತ್ತಿದ್ದಾರೆ. ಇಂಥ ಹೇಳಿಕೆ ಇದು ಅವರ ಮಾನಸಿಕ ಸ್ಥಿತಿಯನ್ನು ತೋರಿಸುತ್ತದೆ. ರಾಜ್ಯದ ಜನರ ಗಮನವನ್ನು ಬೇರೆ ಸೆಳೆಯುವ ಪ್ರಯತ್ನದ ಭಾಗವಾಗಿದೆ ಎಂದರು.