
ಪ್ರಮೋದ್ ಮುತಾಲಿಕ್'ರಿಗೆ ಕಾರ್ಕಳ ಕ್ಷೇತ್ರ ಬಿಟ್ಟುಕೊಡದಿದ್ದರೆ ಸಿ.ಟಿ ರವಿಯ ವಿರುದ್ಧವೂ ಶ್ರೀರಾಮ ಸೇನೆ ಅಭ್ಯರ್ಥಿ ಕಣಕ್ಕೆ: ಎಚ್ಚರಿಕೆ ನೀಡಿದ ರಂಜಿತ್ ಶೆಟ್ಟಿ
ಚಿಕ್ಕಮಗಳೂರು: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಅವರಿಗೆ ಕಾರ್ಕಳ ಕ್ಷೇತ್ರ ಬಿಟ್ಟುಕೊಡದಿದ್ದರೆ, ಶ್ರೀರಾಮ ಸೇನೆ ಸಿ.ಟಿ ರವಿಯ ವಿರುದ್ಧವೂ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದೆ ಎಂದು ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ರಂಜಿತ್ ಶೆಟ್ಟಿ ಎಚ್ಚರಿಕೆ ನೀಡಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಮೋದ್ ಮುತಾಲಿಕ್ ಅವರಿಗೆ ಕಾರ್ಕಳ ಕ್ಷೇತ್ರದಲ್ಲಿ ಒಳ್ಳೆಯ ಬೆಂಬಲ ಇದೆ. ಅವರು ಈ ಬಾರಿ ನಿಂತರೆ ಖಂಡಿತವಾಗಿಯೂ ಗೆಲ್ಲುತ್ತಾರೆ ಎಂದರು.
ಪ್ರಮೋದ್ ಮುತಾಲಿಕ್ ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಸೂಕ್ತ ವ್ಯಕ್ತಿಯಾಗಿದ್ದು, ಈ ಕ್ಷೇತ್ರದಲ್ಲಿ ಬಿಜೆಪಿ ಒಂದು ವೇಳೆ, ಬಿಜೆಪಿ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಹಿಂದೂ ಸಂಘಟನೆಗಳು ಇದನ್ನು ಗಂಭೀರವಾಗಿ ತೆಗೆದುಕೊಂಡು ಸಿ.ಟಿ ರವಿಯ (CT Ravi) ವಿರುದ್ಧವೂ ಅಭ್ಯರ್ಥಿಯನ್ನು ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಮುತಾಲಿಕ್ ಅವರು 47 ವರ್ಷಗಳಿಂದ ಮನೆ ಬಿಟ್ಟು ಬ್ರಹ್ಮಚಾರಿಯಾಗಿ ದೇಶ, ಧರ್ಮಕ್ಕಾಗಿ ಹೋರಾಡುತ್ತಿದ್ದಾರೆ. ಈ ಹಿಂದೆ ಬಹಳಷ್ಟು ರಾಜಕೀಯ ಅವಕಾಶವಿದ್ದಾಗಲೂ ಅದನ್ನು ಅವರು ತಿರಸ್ಕರಿಸಿದ್ದರು ಎಂದ ಅವರು, BJP ಬೆಳವಣಿಗೆಯಲ್ಲಿ ಪ್ರಮೋದ್ ಮುತಾಲಿಕ್ ಪಾತ್ರವೂ ಇದೆ. ಕರಾವಳಿ ಭಾಗದಲ್ಲಿ ಬಿಜೆಪಿ ನೆಲೆಯೂರಲು ಅವರೇ ಕಾರಣ ಎನ್ನುವುದು ಸಮಾಜಕ್ಕೆ ತಿಳಿದಿದೆ. ಈ ಹಿನ್ನೆಲೆಯಲ್ಲಿ ಪ್ರಮೋದ್ ಮುತಾಲಿಕ್ ಅವರನ್ನು ಬೆಂಬಲಿಸುವಂತೆ ಒತ್ತಾಯಿಸಿದರು.