ಸುನಿಲ್ ಕುಮಾರ್ ವಿರುದ್ಧ ಚುನಾವಣೆಗೆ ನಿಲ್ಲಲು ಬಿಜೆಪಿ ಸಚಿವರು, ಶಾಸಕರಿಂದಲೇ ತನುಮನ ಧನದ ಸಹಕಾರ: ಪ್ರಮೋದ್ ಮುತಾಲಿಕ್

ಸುನಿಲ್ ಕುಮಾರ್ ವಿರುದ್ಧ ಚುನಾವಣೆಗೆ ನಿಲ್ಲಲು ಬಿಜೆಪಿ ಸಚಿವರು, ಶಾಸಕರಿಂದಲೇ ತನುಮನ ಧನದ ಸಹಕಾರ: ಪ್ರಮೋದ್ ಮುತಾಲಿಕ್

ಮಂಗಳೂರು(Headlines Kannada): ಕಾರ್ಕಳದಲ್ಲಿ ಸ್ಪರ್ಧಿಸಲು ಬಿಜೆಪಿ ಸಚಿವರು, ಶಾಸಕರು ತನುಮನ ಧನದ ಸಹಕಾರ ನೀಡುವ ಭರವಸೆ ನೀಡಿದ್ದು, ಈ ಹಿನ್ನೆಲೆಯಲ್ಲಿ ತಾನು ಈ ಬಾರಿ ಚುನಾವಣಾ ಕಣಕ್ಕಿಳಿಯುತ್ತಿದ್ದೇನೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಸ್ಪೋಟಕ ಹೇಳಿಕೆ ನೀಡಿದ್ದಾರೆ.

ಮಂಗಳೂರಿನಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸುನಿಲ್ ಕುಮಾರ್ ರಾಜ್ಯದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿಸಲ್ಪಡುತ್ತಿದ್ದು, ಮುಖ್ಯಮಂತ್ರಿ ರೇಸ್ ನಲ್ಲಿರುವ ಕೆಲವು ಬಿಜೆಪಿಯ ಮುಖಂಡರು ನನಗೆ ತನುಮನ ಧನದ ಸಹಕಾರದ ಭರವಸೆ ನೀಡಿದ್ದಾರೆ. ಕಾರ್ಕಳದಲ್ಲಿ ಈ ಬಾರಿ ನಕಲಿ ಹಿಂದುತ್ವ ಮತ್ತು ಭ್ರ#ಷ್ಟಾಚಾರದ ವಿರುದ್ದ ನನ್ನ ಸ್ಪರ್ಧೆ. ಈ ಕಾರಣದಿಂದ ನನ್ನ ಗೆಲುವು ಖಚಿತ ಎಂದರು.

ಕಾರ್ಕಳ ಶಾಸಕ ಸುನಿಲ್ ಕುಮಾರ್ ಆಸ್ತಿ ಎಷ್ಟಿದೆ ಗೊತ್ತಾ..?

2004 ರಲ್ಲಿ ಕಾರ್ಕಳ ಶಾಸಕ ಸುನಿಲ್ ಕುಮಾರ್ ಸ್ಪರ್ಧಿಸಿದಾಗ ಆಸ್ತಿ ಎಷ್ಟಿತ್ತು..? ಶಾಸಕರು 3 ಬಾರಿ ಗೆದ್ದ ಮೇಲೆ ಈಗ ಆಸ್ತಿ ಎಷ್ಟಿದೆ..? ಕಾರ್ಕಳ ಶಾಸಕರ ಆಸ್ತಿ ಬಗ್ಗೆ ದಾಖಲೆಗಳೇ ಇಲ್ಲ..? ಕಾರ್ಕಳದಲ್ಲಿ ಅಭಿವೃದ್ಧಿಗಿಂತ ಭ್ರಷ್ಟಚಾರ ಹೆಚ್ಚು ಆಗಿದೆ ಎಂದು ಕಾರ್ಕಳ ಶಾಸಕ ಸುನೀಲ್​ ಕುಮಾರ್​ ವಿರುದ್ಧ ಮುತಾಲಿಕ್​ ಆರೋಪಿಸಿದ್ದಾರೆ.

ನಾನು ಚುನಾವಣೆಯಿಂದ ಹಿಂದೆ ಸರಿಯುವ ಮಾತೆ ಇಲ್ಲ

ಕಳೆದ 3 ತಿಂಗಳಿಂದ ಈ ಕ್ಷೇತ್ರದಲ್ಲಿ ದುಡಿಯುತ್ತಿದ್ದೀನಿ, ಈಗಾಗಲೇ ಮೊದಲ ಹಂತವಾಗಿ 50 ಕಾರ್ಯಕರ್ತರು ಬಂದಿದ್ದಾರೆ ಎಂದ ಮುತಾಲಿಕ್, ತಾನು ಚುನಾವಣಾ ಕಣದಿಂದ ಹಿಂದೆ ಸರಿಯೋ ಮಾತೇ ಇಲ್ಲ.. ಯಾವ ಒತ್ತಡವೂ ಇಲ್ಲ ಎಂದರು.

ಚುನಾವಣೆ ವೇಳೆ ನನ್ನ ಮೇಲೆ ನಿರ್ಬಂಧ ಹಾಕಿದ್ರೆ ಹೊರಗಡೆ ನಿಂತು ಗೆಲ್ತೀನಿ,  ಕ್ಷೇತ್ರದಲ್ಲಿ ಈಗಾಗಲೇ 210 ಬೂತ್​ಗಳನ್ನ ರಚಿಸಿದ್ದೇನೆ. ಕಾರ್ಕಳ ಕ್ಷೇತ್ರದಲ್ಲಿ ಅನುಮಾನ ಇಲ್ಲದೇ ಗೆದ್ದೇ ಗೆಲ್ತೇನೆ ಎಂಬ ಭರವಸೆ ನನಗಿದೆ ಎಂದು  ಪ್ರಮೋದ್ ಮುತಾಲಿಕ್ ಹೇಳಿದರು.

Ads on article

Advertise in articles 1

advertising articles 2

Advertise under the article