
ಚುನಾವಣೆಗಾಗಿ ಹುಬ್ಬಳ್ಳಿ ಈದ್ಗಾ ವಿವಾದಕ್ಕೆ ಸರಕಾರದಿಂದ ವಿ#ಷಬೀಜ ಬಿತ್ತುವ ಕೆಲಸ: ಶಾಸಕ ಪ್ರಸಾದ್ ಅಬ್ಬಯ್ಯ ಆಕ್ರೋಶ
Thursday, February 9, 2023
ಬೆಂಗಳೂರು: ಚುನಾವಣಾ ಹಿನ್ನೆಲೆಯಲ್ಲಿ ಬಿಜೆಪಿ ಸರಕಾರ ಹುಬ್ಬಳ್ಳಿ ಧಾರವಾಡ ಈದ್ಗಾ ವಿವಾದಕ್ಕೆ ಸಂಬಂಧಿಸಿದಂತೆ ವಿ#ಷಬೀಜ ಬಿತ್ತುವ ಕೆಲಸ ಮಾಡುತ್ತಿದೆ ಎಂದು ಹುಬ್ಬಳ್ಳಿ ಪೂರ್ವ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಪ್ರಸಾದ್ ಅಬ್ಬಯ್ಯ ಕಿಡಿಕಾರಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿ ಧಾರವಾಡ ಕ್ಷೇತ್ರದ ಜನತೆ ಯಾವುದೇ ವಿವಾದ, ಅಶಾಂತಿಯನ್ನು ಬಯಸುವುದಿಲ್ಲ. ಆದರೆ ಬಿಜೆಪಿ ಮುಂದಿನ ಚುನಾವಣೆಯನ್ನು ನೆಪ ಮಾಡಿಕೊಂಡು ಈದ್ಗಾ ವಿವಾದಕ್ಕೆ ತುಪ್ಪ ಸೂರ್ಯುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.
ಹುಬ್ಬಳ್ಳಿ ಧಾರವಾಡ ಜನರು ಶಾಂತಿ, ಸೌಹಾರ್ದತೆಯಿಂದ ಬದುಕುತ್ತಿದ್ದಾರೆ. ಇಂತಹ ಸಂದರ್ಭಗಳಲ್ಲಿ ವಿ#ಷ ಬೀಜ ಬಿತ್ತುವ ಕೆಲಸ ಸರ್ಕಾರ ಮಾಡಬಾರದು ಎಂದ ಪ್ರಸಾದ್ ಅಬ್ಬಯ್ಯ, ಈ ವಿವಾದವನ್ನು ಶಾಂತಿಯುವವಾಗಿ ಬಗೆಹರಿಸಬೇಕು. ಆದರೆ ಚುನಾವಣೆ ಬರುವಾಗ ಇಂತಹ ವಿಚಾರ ಮುನ್ನಲೆಗೆ ಬರುತ್ತದೆ ಎಂದು ಆರೋಪಿಸಿದರು.