
ಸ್ವಾರ್ಥ ರಹಿತ ಸಮಾಜ ಕಟ್ಟಲು ಶ್ರಮಿಸಿ: ಭೀಮರಾಯ ಭಂಡಾರಿ
ಯಾದಗಿರಿ: ಯಾದಗಿರಿ ಜಿಲ್ಲೆಯ ವಡಗೇರಾ ತಾಲ್ಲೂಕಿನ ಬೆಂಡೆಬೆಂಬಳಿ ಗ್ರಾಮದಲ್ಲಿ ಶುಕ್ರವಾರ ಸಂಗೊಳ್ಳಿ ರಾಯಣ್ಣ ಯುವ ಗರ್ಜನೆ ಜಿಲ್ಲಾಧ್ಯಕ್ಷ ಭೀಮರಾಯ ಬಂಡಾರಿಯವರ ನೇತೃತ್ವದಲ್ಲಿ ಸಂಗೊಳ್ಳಿ ರಾಯಣ್ಣ ಯುವ ಗರ್ಜನೆ ಗ್ರಾಮ ಘಟಕದ ಪದಾಧಿಕಾರಿಗಳ ನೇಮಕ ಮಾಡಲಾಯಿತು.
ನಂತರ ಮಾತನಾಡಿದ ಸಂಗೊಳ್ಳಿ ರಾಯಣ್ಣ ಯುವ ಗರ್ಜನೆ ಜಿಲ್ಲಾ ಅಧ್ಯಕ್ಷ, ನೂತನ ಪದಾಧಿಕಾರಿಗಳು ತಮಗೆ ವಹಿಸಿದ ಜವಾಬ್ದಾರಿಯನ್ನು, ನಿರ್ವಹಿಸಿ, ಶೋಷಣೆಗೊಳಪಟ್ಟ ವ್ಯಕ್ತಿಗಳನ್ನು ಮುಖ್ಯ ವಾಹಿನಿಗೆ ತರಲು ಅವಿರತವಾಗಿ ಶ್ರಮಿಸಬೇಕು ಮತ್ತು ಸ್ವಾರ್ಥ ರಹಿತ ಸಮಾಜ ಕಟ್ಟಲು ತೊಡಗಿಸಿಕೊಳ್ಳಬೇಕೆಂದು ತಿಳಿಸಿದರು.
ಸಮಾಜದಲ್ಲಿ ಯಾವುದೇ ಅನ್ಯಾಯಗಳು ಮತ್ತು ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ದ್ವನಿ ಎತ್ತಿ ನ್ಯಾಯಕೊಡಿಸಬೇಕು ಮತ್ತು ಸಂಘಟನೆಯನ್ನು ಎಲ್ಲಾ ರಂಗಗಳಲ್ಲಿ ಬಲಪಡಿಸಿ, ಕಟ್ಟ ಕಡೆಯ ವ್ಯಕ್ತಿಗೆ ನೆರವಿಗೆ ಧಾವಿಸಿ ಸಹಾಯ ಮಾಡಬೇಕು ಎಂದು ತಿಳಿಸಿದರು.
ವೀರೇಶ್ ರಂಜನೆಗೆ - ಅಧ್ಯಕ್ಷ,
ನಿಂಗಪ್ಪ ರಾಕುಂಪಿ - ಗೌರವಾಧ್ಯಕ್ಷ,
ಮಾಳಪ್ಪ ಕಿಣಿಕೇರಿ - ಉಪಾಧ್ಯಕ್ಷ,
ಗಡ್ಡೆಲಿಂಗ ಕಾಟ್ಮಳಿ - ಕಾರ್ಯದರ್ಶಿ,
ಮೌನೇಶ್ ಚಿಗರಿ -ಪ್ರಧಾನ ಕಾರ್ಯದರ್ಶಿ,
ದೇವಪ್ಪ ಹಿರೆ ಕುರುಬರು - ಸಂಘಟನಾ ಕಾರ್ಯದರ್ಶಿ ಅವರನ್ನು ನೇಮಕ ಮಾಡಿ ಆದೇಶ ಪತ್ರ ನೀಡಿದರು.
ಈ ಸಂದರ್ಭದಲ್ಲಿ ವಡಗೇರಾ ತಾಲೂಕ ಘಟಕ ಅಧ್ಯಕ್ಷ ದೇವು ಜಡಿ, ಗೌರವಾಧ್ಯಕ್ಷ ಭೀಮಣ್ಣ ಬೂದಿಹಾಳ, ನಗರ ಘಟಕ ಅಧ್ಯಕ್ಷ ಗಣೇಶ ನಸ್ಲಾಯ್, ಗಡ್ಡೆಲಿಂಗ ಬೆಂಡೆಗಂಬುಳಿ, ಸಿದ್ದಪ್ಪ ಕಡೇಚೂರು, ಮಾಳಿಂಗರಾಯ ಹಾಗೂ ಸಂಗೊಳ್ಳಿ ರಾಯಣ್ಣ ಅಭಿಮಾನಿಗಳು, ಊರಿನ ಹಿರಿಯರು ಮತ್ತು ಸಮಾಜದ ಮುಖಂಡರು ಹಾಜರಿದ್ದರು.