ಭ್ರಷ್ಟಾಚಾರದಲ್ಲಿಯೇ ಮುಳುಗಿರುವ ರಾಜ್ಯ ಬಿಜೆಪಿ ಸರಕಾರ; ಎಲೆಕ್ಷನ್​ ಫಂಡ್ ರೈಸ್ ಮಾಡಲು ಬಿಜೆಪಿ ಟೆಂಡರ್​ ಹಗರಣ: ಕಾಂಗ್ರೆಸ್

ಭ್ರಷ್ಟಾಚಾರದಲ್ಲಿಯೇ ಮುಳುಗಿರುವ ರಾಜ್ಯ ಬಿಜೆಪಿ ಸರಕಾರ; ಎಲೆಕ್ಷನ್​ ಫಂಡ್ ರೈಸ್ ಮಾಡಲು ಬಿಜೆಪಿ ಟೆಂಡರ್​ ಹಗರಣ: ಕಾಂಗ್ರೆಸ್

ಬೆಂಗಳೂರು: ರಾಜ್ಯದ ಬಿಜೆಪಿ ಸರಕಾರದ ಭ್ರಷ್ಟಾಚಾರ, 40 ಪರ್ಸೆಂಟ್​ ಕಮಿಷನ್​​ ದಂ#ಧೆ ವಿರುದ್ಧ ಹರಿಹಾಯ್ದಿರುವ ಕಾಂಗ್ರೆಸ್, ಈ ಬಾರಿ ಎಲೆಕ್ಷನ್​ ಫಂಡ್ ರೈಸ್ ಮಾಡಲು ಬಿಜೆಪಿ ಟೆಂಡರ್​ ಹಗರಣ ಮಾಡುತ್ತಿದೆ ಎಂದು ಆರೋಪ ಮಾಡಿದೆ.

ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದು, ಇಂಥ ಭ್ರಷ್ಟ ಸರಕಾರ ರಾಜ್ಯ ಎಂದು ಕಂಡಿಲ್ಲ ಎಂದರು. 

ರಾಜ್ಯದ ಬೊಕ್ಕಸವನ್ನು ಸರ್ಕಾರವೇ ಲೂಟಿ ಮಾಡುತ್ತಿದ್ದು, ಚುನಾವಣೆಯ ಹಿನ್ನೆಲೆಯಲ್ಲಿ ಯದ್ವಾತದ್ವಾ ಎಲ್ಲಾ ಪ್ರಾಜೆಕ್ಟ್​ ಗಳಿಗೆ ಒಪ್ಪಿಗೆ ನೀಡುತ್ತಿದ್ದಾರೆ ಎಂದ ಅವರು, ಟೆಂಡರ್​ ಹಣ ಹೆಚ್ಚು ಮಾಡಿದ್ರೆ ಹೆಚ್ಚು ಕಮಿಷನ್​​ ನೀಡುತ್ತಿದ್ದಾರೆಂದು ಗುಡಿಗಿದರು. 

ಯೋಜನೆಯೊಂದಕ್ಕೆ ಒಂದೇ ದಿನದಲ್ಲಿ 18,000 ಕೋಟಿ ಬಿಲ್​ ಆಗಿದ್ದು, ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್​ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಈ ಮೂಲಕ ಬಿಜೆಪಿ ಸರಕಾರ ಎಲೆಕ್ಷನ್​ ಫಂಡ್ ರೈಸ್ ಮಾಡಲು ಟೆಂಡರ್​ ಹಗರಣ ಮಾಡುತ್ತಿದ್ದಾರೆ ಎಂದರು.

ಮಂತ್ರಿ ಬೊಮ್ಮಾಯಿ ಹೆಚ್ಚು ಕಮಿಷನ್​ ಕೊಡುವವರಿಗೆ ಗುತ್ತಿಗೆ ಕೊಡುತ್ತಿದ್ದಾರೆ. ಇದು 40 ಪರ್ಸೆಂಟ್​ ಕಮಿಷನ್​​ ಹಗರಣದ ಮುಂದುವರೆದ ಭಾಗವಾಗಿದೆ ಎಂದರು. ಕಾಂಟ್ರಾಕ್ಟರ್​​, ಅಧಿಕಾರಿಗಳಿಗೆ ಈ ಮೂಲಕ ನಾವು ಎಚ್ಚರಿಕೆ ನೀಡುತ್ತಿದ್ದೇವೆ.  ಕಾಂಟ್ರಾಕ್ಟರ್​​​ಗಳು, ಅಧಿಕಾರಿಗಳ ವಿರುದ್ಧ ಕ್ರಿಮಿನಲ್​ ಮೊಕದ್ದಮೆ ಹಾಕುವ ಜೊತೆಗೆ ಯಾರನ್ನೂ ಬಿಡಲ್ಲ, ಎಲ್ಲರನ್ನೂ ಜೈಲಿಗೆ ಹಾಕುತ್ತೇವೆ ಎಂದ ಸಿದ್ದರಾಮಯ್ಯ, ನಾವು  ಅಧಿಕಾರಕ್ಕೆ ಬಂದ ತಕ್ಷಣ ಎಲ್ಲಾ ಕಾಮಗಾರಿಗಳ ತನಿಖೆ ಮಾಡಿಸುತ್ತೇವೆ ಎಂದರು.

ರಾಜ್ಯದಲ್ಲಿ ಚುನಾವಣೆಗೆ ಇನ್ನೊಂದೇ ತಿಂಗಳು ಬಾಕಿ ಇರುವುದು. ಚುನಾವಣೆಗೆ ದುಡ್ಡು ಮಾಡಿಕೊಳ್ಳೋದಕ್ಕೋಸ್ಕರ ಅತೃಪ್ತ ಸಚಿವರು, ಶಾಸಕರಿಗೆ ದುಡ್ಡು ಮಾಡಿಕೊಡಲು ನೀರಾವರಿ ಇಲಾಖೆಯಲ್ಲಿ ಟೆಂಡರ್ ಕರೆಯುತ್ತಿದ್ದಾರೆ. ಯಾವುದೇ ರೀತಿಯ ಪಾರದರ್ಶಕತೆ ಇಲ್ಲದೆ, ತರಾತುರಿಯಲ್ಲಿ ಕಾಮಗಾರಿ ಮಾಡಲು ಮುಂದಾಗಿದ್ದು, ಕಮಿಷನ್ ಹೊಡೆಯಲು ಹೀಗೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ರಾಜ್ಯದಲ್ಲಿ ಬಾಕಿ ಇರುವ  ಬಿಲ್ಸ್ 20 ಸಾವಿರ ಕೋಟಿ ರೂ. ಇದೆ. ಮುಖ್ಯಮಂತ್ರಿ ಬೊಮ್ಮಾಯಿ ಕಚೇರಿಯಲ್ಲೇ ಕಮಿಷನ್ ನಡೆಯುತ್ತಿದೆ. ಇಲ್ಲಿ ಜಾಸ್ತಿ ಕಮಿಷನ್ ಕೊಟ್ಟವರ ಬಿಲ್ ಮಾತ್ರ ಕ್ಲಿಯರ್ ಮಾಡುತ್ತಿದ್ದಾರೆ ಎಂದರು.

ಬರೀ ವಸೂಲಿ ಮಾಡಿ ಎಲೆಕ್ಷನ್‌ಗೆ ಹೋಗುತ್ತಾ ಇದ್ದಾರೆ. ಅವರ ಶಾಸಕರೇ ನಮಗೆ ಈ ಬಗ್ಗೆ ಮಾಹಿತಿ ಕೊಡುತ್ತಿದ್ದಾರೆ. ಕೆಲಸ, ಬಿಲ್ ಕ್ಲಿಯರ್ ಆಗಬೇಕಾದರೆ ಸಿಎಂ ಕಚೇರಿಯಲ್ಲಿ ಒಬ್ಬರನ್ನು ಕೂರಿಸಿದ್ದಾರೆ. ಅವರಿಗೆ ಕಮಿಷನ್ ಕೊಟ್ಟರೆ ಕ್ಲಿಯರ್ ಆಗುತ್ತದೆ. 7,000 ಕೋಟಿ ರೂ. ಪಾಟ್ ಹೋಲ್ ಮುಚ್ಚಿದ್ದಾರೆ ಎನ್ನುತ್ತಿದ್ದಾರೆ. ನಾವು ಅಧಿಕಾರಕ್ಕೆ ಬಂದ ಮೇಲೆ ತಿಂಗಳಲ್ಲಿ ಎಲ್ಲವನ್ನೂ ರದ್ದು ಮಾಡುತ್ತೇವೆ. ನಾವು ಸುಮ್ಮನೆ ಬಿಡಲ್ಲ. ಎಲ್ಲವನ್ನೂ ತನಿಖೆ ಮಾಡುತ್ತೇವೆ, ಎಲ್ಲರನ್ನೂ ಒಳಗೆ ಹಾಕಿಸುತ್ತೇವೆ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಬಳಿಕ ಮಾತನಾಡಿದ ಕಾಂಗ್ರೆಸ್ ಹಿರಿಯ ನಾಯಕ ರಣದೀಪ್ ಸುರ್ಜೇವಾಲಾ, 40% ಕಮಿಷನ್ ಮುಂದುವರಿದ ಭಾಗ ನಮ್ಮ ಸರ್ಕಾರ ಬಂದ ಮೇಲೆ ವಿಚಾರಣೆ ಮಾಡಿಸುತ್ತೇವೆ. ತನಿಖಾ ಸಂಸ್ಥೆಯನ್ನು ರಚನೆ ಮಾಡಿಸುತ್ತೇವೆ. ಬಸವರಾಜ ಬೊಮ್ಮಾಯಿ ಜೊತೆ ಸಚಿವರು, ಗುತ್ತಿಗೆದಾರರು, ಅಧಿಕಾರಿಗಳು ಶಾಮೀಲಾಗಿದ್ದಾರೆ. ಎಲ್ಲರಿಗೂ ನಾವು ಎಚ್ಚರಿಕೆ ಕೊಡುತ್ತಿದ್ದೇವೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಹಿರಿಯ ನಾಯಕ ರಣದೀಪ್ ಸುರ್ಜೇವಾಲಾ, ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article