ತಮಿಳುನಾಡಿನಲ್ಲಿ ಉಚಿತ ಸೀರೆ, ಧೋತಿ ವಿತರಣೆ ವೇಳೆ ಕಾಲ್ತುಳಿತಕ್ಕೆ ನಾಲ್ವರು ಸಾ#ವು

ತಮಿಳುನಾಡಿನಲ್ಲಿ ಉಚಿತ ಸೀರೆ, ಧೋತಿ ವಿತರಣೆ ವೇಳೆ ಕಾಲ್ತುಳಿತಕ್ಕೆ ನಾಲ್ವರು ಸಾ#ವು



ಚೆನ್ನೈ: ತಮಿಳುನಾಡಿನ ತಿರುಪತ್ತೂರಿನ ವಾಣಿಯಂಬಾಡಿ ಎಂಬಲ್ಲಿ ಉಚಿತ ಸೀರೆ, ಧೋತಿಗಾಗಿ ಮಹಿಳೆಯರು ಮುಗಿಬಿದ್ದಿದ್ದರಿಂದ ಹಠಾತ್ ಕಾಲ್ತುಳಿತ ಸಂಭವಿಸಿದ್ದು  ನಾಲ್ವರು ಮಹಿಳೆಯರು ಸಾ#ವನ್ನಪ್ಪಿದ್ದಾರೆ.

ತಮಿಳುನಾಡಲ್ಲಿ ತೈಪೂಸಂ ಎಂಬ ಹಬ್ಬ ಆಚರಿಸಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ವಾಣಿಯಂಬಾಡಿಯ ಸ್ಥಳೀಯ ರಾಜಕೀಯ ಮುಖಂಡರೊಬ್ಬರು ಬಡವರಿಗೆ ಉಚಿತ ಸೀರೆ ಹಾಗು ಪಂಚೆ ವಿತರಿಸುವ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಈ ವೇಳೆ ಉಚಿತವಾಗಿ ಸೀರೆ, ಪಂಚೆ ಪಡೆಯಲು ಬಂದ ಜನರು ಮುಗಿಬಿದ್ದ ಕಾರಣ ಕಾಲ್ತುಳಿತ ಸಂಭವಿಸಿ ನಾಲ್ವರು ಮೃ#ತಪಟ್ಟಿದ್ದಾರೆ ಎನ್ನಲಾಗುತ್ತಿದೆ.

ಕಾಲ್ತುಳಿತದಲ್ಲಿ ಪ್ರಾ#ಣ ಕ#ಳೆದುಕೊಂಡ ಮಹಿಳೆಯರ ಕುಟುಂಬಗಳಿಗೆ ಸಾಂತ್ವನ ಹೇಳಿರುವ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ಪ್ರತಿ ಮಹಿಳೆಯ ಕುಟುಂಬಕ್ಕೆ ಎರಡು ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.

Ads on article

Advertise in articles 1

advertising articles 2

Advertise under the article