ಬಿಜೆಪಿಯ ಗುಲಾಮನಂತಾಗಿರುವ ಚುನಾವಣಾ ಆಯೋಗ; ದೇಶ ಇಂದು ಸರ್ವಾಧಿಕಾರದ ಕಡೆಗೆ ಸಾಗುತ್ತಿದೆ: ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಉದ್ಧವ್ ಠಾಕ್ರೆ

ಬಿಜೆಪಿಯ ಗುಲಾಮನಂತಾಗಿರುವ ಚುನಾವಣಾ ಆಯೋಗ; ದೇಶ ಇಂದು ಸರ್ವಾಧಿಕಾರದ ಕಡೆಗೆ ಸಾಗುತ್ತಿದೆ: ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಉದ್ಧವ್ ಠಾಕ್ರೆ

ಮುಂಬೈ: ದೇಶದಲ್ಲಿ ಚುನಾವಣಾ ಆಯೋಗ ಆಡಳಿತ ಪಕ್ಷ ಬಿಜೆಪಿ ಗುಲಾಮನಂತೆ ಕೆಲಸ ಮಾಡುತ್ತಿದ್ದು, ಪ್ರಜಾಪ್ರಭುತ್ವ ದೇಶ ಇಂದು ಸರ್ವಾಧಿಕಾರದ ಕಡೆಗೆ ಸಾಗುತ್ತಿದೆ ಎಂದು ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಗಂಭೀರ ಆರೋಪ ಮಾಡಿದ್ದಾರೆ.

ಚುನಾವಣಾ ಆಯೋಗ ಶಿವಸೇನೆಯ ಮೂಲ ಚಿಹ್ನೆಯಾದ 'ಬಿಲ್ಲು ಬಾಣ'ವನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಬಣಕ್ಕೆ ನೀಡಿದ ಬೆನ್ನಲ್ಲೇ, ಕೇಂದ್ರ ಬಿಜೆಪಿ ಸರಕಾರದ ವಿರುದ್ಧ ಅವರು ಶನಿವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಚುನಾವಣಾ ಆಯೋಗದ ನಿರ್ಧಾರಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಉದ್ಧವ್ ಠಾಕ್ರೆ ಅವರು, ಆಯೋಗ ಶಿವಸೇನೆಯ ತಮ್ಮ ಪ್ರತಿಸ್ಪರ್ಧಿ ಬಣಗಳ ಪರವಾಗಿ ಮೊದಲೇ ನಿರ್ಧಾರಗಳನ್ನು ತೆಗೆದುಕೊಂಡಿದ್ದರೆ, ನಮಗೆ ಅವರು ಅಫಿಡವಿಟ್‌ಗಳು ಮತ್ತು ಇತರೆ ದಾಖಲೆಗಳನ್ನು ಸಲ್ಲಿಸಲು ಹೇಳಿ, ವಿಚಾರಣೆಯ ಪ್ರಹಸನ ಮಾಡಿದ್ದು ಏಕೆ?  ಎಂದು ಪ್ರಶ್ನಿಸಿದ್ದಾರೆ.

ಭಾರತವು ಸ್ವಾತಂತ್ರ್ಯದ 75ನೇ ವರ್ಷವನ್ನು ಆಚರಿಸುತ್ತಿದ್ದು, ಪ್ರಸಕ್ತ ದೇಶದಲ್ಲಿ ನಡೆಯುತ್ತಿರುವುದು ಮಾತ್ರ ತುಂಬಾ ನಾಚಿಕೆಗೇಡಿನ ಸಂಗತಿ. ದೇಶದಲ್ಲಿ ಪ್ರಜಾಪ್ರಭುತ್ವ ಉಳಿದಿಲ್ಲ, ದೇಶದ ನ್ಯಾಯಾಂಗವು ನಮ್ಮ ದೇಶದ ಭರವಸೆಯ ಕೊನೆಯ ಆಶಾ ಕಿರಣವಾಗಿದೆ ಎಂದರು.

ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸದೆ, ಎಲ್ಲಾ ತುರ್ತು ಪರಿಸ್ಥಿತಿಗಳನ್ನು ಅನುಸರಿಸಲಾಗುತ್ತಿದೆ ಮತ್ತು ಜಾರಿಗೊಳಿಸಲಾಗುತ್ತಿದೆ. ಮುಂದೆ ನಾವು ಜನತಾ ನ್ಯಾಯಾಲಯಕ್ಕೆ ಹೋಗುತ್ತೇವೆ ಮತ್ತು ಅವರ ಬೆಂಬಲವನ್ನು ಪಡೆಯುತ್ತೇವೆ  ಎಂದಿರುವ ಉದ್ಧವ್ ಠಾಕ್ರೆ, 1960ರ ದಶಕದಲ್ಲಿ ನನ್ನ ತಂದೆಯಂತೆ ಶಿವಸೇನೆಯನ್ನು ಕಟ್ಟುತ್ತೇವೆ ಎಂದು ಹೇಳಿದ್ದಾರೆ.

Ads on article

Advertise in articles 1

advertising articles 2

Advertise under the article