![ಟರ್ಕಿ ಭೂಕಂಪ; 12 ದಿನಗಳ ಬಳಿಕ ಕಟ್ಟಡಗಳಡಿಯಲ್ಲಿ ಜೀ#ವಂತವಾಗಿ ಬದುಕಿ ಬಂದ ವ್ಯಕ್ತಿ! ಟರ್ಕಿ ಭೂಕಂಪ; 12 ದಿನಗಳ ಬಳಿಕ ಕಟ್ಟಡಗಳಡಿಯಲ್ಲಿ ಜೀ#ವಂತವಾಗಿ ಬದುಕಿ ಬಂದ ವ್ಯಕ್ತಿ!](https://blogger.googleusercontent.com/img/b/R29vZ2xl/AVvXsEgElLUXOpcQMONCLQDgaKCyl3kzHEexBA7niuilbPb8EGTTP9WvJE-8Oro5ws9PCH5a3VJXEOPNvFaJCfFL3sDat7oLvSTwjlQQXTrjro_0Q4-tQQjPbdFF0XRna925cxB7S90U-wywJzKhYoecZb5squYJ0PCFPzTOpb8qGKjcSDL-8CxFXTHNFt16CA/w640-h376/turkey.jpg)
ಟರ್ಕಿ ಭೂಕಂಪ; 12 ದಿನಗಳ ಬಳಿಕ ಕಟ್ಟಡಗಳಡಿಯಲ್ಲಿ ಜೀ#ವಂತವಾಗಿ ಬದುಕಿ ಬಂದ ವ್ಯಕ್ತಿ!
Saturday, February 18, 2023
ಇಸ್ತಾಂಬುಲ್: ಟರ್ಕಿಯಲ್ಲಿ ಪ್ರಬಲ ಭೂಕಂಪ ಸಂಭವಿಸಿ ಸಾವಿರಾರು ಮಂದಿ ಸಾ#ವನ್ನಪ್ಪಿದ್ದು, ಈಗ 12 ದಿನಗಳ ಬಳಿಕ ಕಟ್ಟಡಗಳ ಅವಶೇಷಗಳ ಅಡಿಯಲ್ಲಿದ್ದ ಪವಾಡ ಸದೃಶ್ಯವಾಗಿ ವ್ಯಕ್ತಿಯೋರ್ವ ಜೀ#ವಂತವಾಗಿ ಬದುಕುಳಿದಿರುವ ಘಟನೆ ಬೆಳಕಿಗೆ ಬಂದಿದೆ.
ನಿನ್ನೆಯಷ್ಟೇ 3 ಮಂದಿಯನ್ನು ಕಟ್ಟಡಗಳ ಅವಶೇಷಗಳ ಅಡಿಯಿಂದ ಹೊರತಂದು ಪಾರು ಮಾಡಲಾಗಿತ್ತು. ಈವತ್ತು 45 ವರ್ಷದ ವ್ಯಕ್ತಿಯೊಬ್ಬನನ್ನು ಕಟ್ಟಡಗಳ ಅಡಿಯಿಂದ ಕಾಪಾಡಲಾಗಿದೆ.
ಟರ್ಕಿ ಭೂಕಂಪ ದುರಂತದಿಂದ ಸಾ#ವನ್ನಪ್ಪಿದವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಈಗ ಸಾ#ವಿನ ಸಂಖ್ಯೆ 45 ಸಾವಿರ ಗಡಿ ದಾಟಿ ಹೋಗಿದೆ. ಅದೃಷ್ಟಕ್ಕೆ ಕಳೆದ 2 ದಿನಗಳಿಂದ ಸಾವಿನ ಸಂಖ್ಯೆ ಏರಿಕೆಯ ಗತಿ ಕಡಿಮೆಗೊಂಡಿದೆ. ಆದರೆ ಈಗಲೂ ನೂರಾರು ಕಟ್ಟಡಗಳ ಅವಶೇಷಗಳನ್ನು ಇನ್ನೂ ಸಂಪೂರ್ಣವಾಗಿ ತೆರವುಗೊಳಿಸಿಲ್ಲದಿರುವುದನ್ನು ಸಾ#ವಿನ ಸಂಖ್ಯೆ ಇನ್ನಷ್ಟು ಏರುವ ಸಾಧ್ಯತೆಯೂ ಇದೆ.