ಆನ್‌ಲೈನ್‌ನಲ್ಲಿ ಕ್ಲಾಸ್ ಮಾಡುತ್ತಿದ್ದ ವೇಳೆ ಶಿಕ್ಷಕನ ಕೊ#ಲೆ; ಎಲ್ಲಾ ದೃಶ್ಯಗಳು ಮೊಬೈಲ್'ನಲ್ಲಿ ಸೆರೆ!
ನೊಯ್ಡಾ(Headlines Kannada): ಶಿಕ್ಷಕನೊಬ್ಬ ಆನ್‌ಲೈನ್‌ನಲ್ಲಿ ತನ್ನ ವಿದ್ಯಾರ್ಥಿಗಳಿಗೆ ಕ್ಲಾಸ್ ಮಾಡುತ್ತಿದ್ದ ವೇಳೆ ಇಬ್ಬರು ಸೇರಿ ಕೊ#ಲೆ ಮಾಡಿರುವ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಉತ್ತರಪ್ರದೇಶದ ಗೊಂಡಾ ಎಂಬಲ್ಲಿ ಸೋಮವಾರ ಸಂಜೆ ಆನ್‌ಲೈನ್‌ನಲ್ಲಿ ಪಾಠ ಮಾಡುತ್ತಿದ್ದ ಖಾಸಗಿ ಶಾಲೆಯ ಶಿಕ್ಷಕನನ್ನು ಕೊ#ಲೆ ಮಾಡಲಾಗಿದೆ. ಶಿಕ್ಷಕ ಆನ್ಲೈನ್'ನಲ್ಲಿ ಕ್ಲಾಸ್ ಮಾಡುತ್ತಿದ್ದ ಕಾರಣ ಎಲ್ಲ ದೃಶ್ಯಗಳು ರೆಕಾರ್ಡಿಂಗ್ ಆಗಿದೆ.
ಉತ್ತರಪ್ರದೇಶದ ಗೊಂಡಾ ಅಂಬೇಡ್ಕರ್‌ನಗರ ಮೂಲದ ಕೃಷ್ಣಕುಮಾರ್ ಯಾದವ್(35 ವರ್ಷ) ಖಾಸಗಿ ಶಾಲೆಯಲ್ಲಿ ಪಾಠ ಮಾಡುತ್ತಿದ್ದು, ವಿದ್ಯಾರ್ಥಿನಿಯೊಬ್ಬಳಿಗೆ ಸಂಜೆ ಗಣಿತ ಮತ್ತು ಹಿಂದಿಯಲ್ಲಿ ಜೂಮ್'ನಲ್ಲಿ ಆನ್ ಲೈನ್ ಪಾಠ ಮಾಡುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಸಂದೀಪ್ ಕುಮಾರ್ ಮತ್ತು ಜಗ್ಗ ಮಿಶ್ರಾ ಎಂಬ ಆರೋಪಿಗಳು ಮನೆಗೆ ನು#ಗ್ಗಿ ಅವರ ಮೇಲೆ ಹ#ಲ್ಲೆ ನಡೆಸಿದ್ದಾರೆ.
ಹಲ್ಲೆ ವೇಳೆ ಕೃಷ್ಣ ಕುಮಾರ್ ಯಾದವ್ ಅವರ ಮೊಬೈಲ್ ಫೋನ್ ಕೆಳಗೆ ಬಿದ್ದಿದೆ. ಆಗ ಮೊಬೈಲ್ನಲ್ಲಿ ಎಲ್ಲವೂ ರೆಕಾರ್ಡ್ ಆಗಿದೆ. ಆಗ ಅವರ ಮೇಲೆ ಆರೋಪಿಗಳಿಬ್ಬರು ಸೇರಿ ಕೊಂ#ದಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಮೊಬೈಲ್ ರೆಕಾರ್ಡಿಂಗ್ನಿಂದಾಗಿ ಆರೋಪಿಗಳನ್ನು ಗುರುತಿಸಲು ಮತ್ತು ಬಂಧಿಸಲು ಪೊಲೀಸರಿಗೆ ಸಹಾಯವಾಯಿತು.
ಪೊಲೀಸರು ಈ ಬಗ್ಗೆ ವಿಚಾರಣೆ ನಡೆಸಿದಾಗ ಆರೋಪಿ ಸಂದೀಪ್ ಕುಮಾರ್ ತಪ್ಪೊಪ್ಪಿಕೊಂಡಿದ್ದಾನೆ. ಕೃಷ್ಣ ಕುಮಾರ್ ಅವರ ಸಹೋದರಿಯನ್ನು ನಾವು ಹಿಂಬಾಲಿಸುತ್ತಿದ್ದ ಕಾರಣ ಕೃಷ್ಣ ಕುಮಾರ್ ತಮ್ಮನ್ನು ಬೆದರಿಸಿದ್ದ, ಈ ಕಾರಣಕ್ಕೆ ಕೊ#ಲೆ ಮಾಡಿರುವುದಾಗಿ ಸಂದೀಪ್ ಹೇಳಿದ್ದಾನೆ.