2019ರಿಂದ 21 ವಿದೇಶಿಗಳಿಗೆ ಪ್ರವಾಸ ಮಾಡಿರುವ ಪ್ರಧಾನಿ ಮೋದಿ; ಪ್ರವಾಸಕ್ಕೆ ಮಾಡಿರುವ ಖರ್ಚು ಎಷ್ಟು ಗೊತ್ತೇ..?

2019ರಿಂದ 21 ವಿದೇಶಿಗಳಿಗೆ ಪ್ರವಾಸ ಮಾಡಿರುವ ಪ್ರಧಾನಿ ಮೋದಿ; ಪ್ರವಾಸಕ್ಕೆ ಮಾಡಿರುವ ಖರ್ಚು ಎಷ್ಟು ಗೊತ್ತೇ..?

ನವದೆಹಲಿ: ಪ್ರಧಾನಿ ಮೋದಿ 2019ರಿಂದ  21 ವಿದೇಶಿಗಳಿಗೆ ಪ್ರವಾಸ ಮಾಡಿದ್ದು ಇದಕ್ಕೆ ಕೇಂದ್ರ ಸರಕಾರ 22.76 ಕೋಟಿ ರೂ.ಗೂ ಹೆಚ್ಚು ಖರ್ಚು ಮಾಡಿದೆ.

ರಾಜ್ಯಸಭೆಯಲ್ಲಿ ಇಂದು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ ಮುರಳೀಧರನ್ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಮೋದಿ ಪ್ರಧಾನಮಂತ್ರಿಯಾದ ಮೇಲೆ ಜಗತ್ತಿನ ವಿವಿಧ ದೇಶಗಳಿಗೆ ಪ್ರವಾಸ ಮಾಡಿದ್ದು, ಅದಕ್ಕಾಗಿ ಕೇಂದ್ರ ಸರಕಾರ 2019ರಿಂದ ಈ ವರಗೆ ಒಟ್ಟು 22,76,76,934 ರೂಪಾಯಿ ಖರ್ಚು ಮಾಡಿದೆ.

2019ರಿಂದ ರಾಷ್ಟ್ರಪತಿಗಳು 8 ವಿದೇಶ ಪ್ರವಾಸಗಳನ್ನು ಮಾಡಿದ್ದು, 2019ರಿಂದ ಈ ಪ್ರವಾಸಗಳಿಗೆ 6.24 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ. ಸಚಿವರ ಪ್ರಕಾರ, 2019ರಿಂದ ಸರ್ಕಾರವು ರಾಷ್ಟ್ರಪತಿಗಳ ಪ್ರವಾಸಕ್ಕೆ 6,24,31,424 ರೂಪಾಯಿ, ಪ್ರಧಾನೀ ಮೋದಿಯ ಪ್ರವಾಸಕ್ಕೆ 22,76,76,934 ರೂಪಾಯಿ ಮತ್ತು ವಿದೇಶಾಂಗ ಸಚಿವರ ಪ್ರವಾಸಕ್ಕೆ 20,87,01,475 ರೂಪಾಯಿ ಖರ್ಚು ಮಾಡಲಾಗಿದೆ.

ರಾಷ್ಟ್ರಪತಿಗಳು ಎಂಟು ವಿದೇಶ ಪ್ರವಾಸಗಳನ್ನು ಮಾಡಿದ್ದರೆ, ಪ್ರಧಾನಿ ಮೋದಿ 2019ರಿಂದ 21 ಪ್ರವಾಸಗಳನ್ನು ಮಾಡಿದ್ದಾರೆ. ಈ ಅವಧಿಯಲ್ಲಿ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು 86 ವಿದೇಶ ಪ್ರವಾಸಗಳನ್ನು ಮಾಡಿದ್ದಾರೆ. 2019ರಿಂದ ಪ್ರಧಾನಿ 3 ಬಾರಿ ಜಪಾನ್ ಮತ್ತು ಅಮೆರಿಕಾ ಮತ್ತು ಯುಎಇಗೆ 2 ಬಾರಿ ಭೇಟಿ ನೀಡಿದ್ದಾರೆ.

ರಾಷ್ಟ್ರಪತಿಗಳ ಭೇಟಿಗಳಲ್ಲಿ 8 ಭೇಟಿಗಳಲ್ಲಿ ಏಳನ್ನು ರಾಮನಾಥ್ ಕೋವಿಂದ್ ಅವರು ಕೈಗೊಂಡಿದ್ದರೆ, ಪ್ರಸ್ತುತ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕಳೆದ ಸೆಪ್ಟೆಂಬರ್‌ನಲ್ಲಿ ಯುಕೆಗೆ ಭೇಟಿ ನೀಡಿದ್ದರು ಎಂದು ತಿಳಿಸಿದ್ದಾರೆ. 

Ads on article

Advertise in articles 1

advertising articles 2

Advertise under the article