ಕೆದಂಬಾಡಿ ಬೈಲ್ ಬ್ರದರ್ಸ್ ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್; ನೂತನ ಅಧ್ಯಕ್ಷರಾಗಿ ಅನ್ಸಾರ್, ಪ್ರ.ಕಾರ್ಯದರ್ಶಿಯಾಗಿ ಫರ್ವಾಝ್, ಕೋಶಾಧಿಕಾರಿಯಾಗಿ ಸಾದಿಕ್ ಖತರ್ ಆಯ್ಕೆ
Friday, February 3, 2023
ಮಂಜೇಶ್ವರ(Headlines Kannada): ಇಲ್ಲಿನ ಪ್ರತಿಷ್ಠಿತ ಬೈಲ್ ಬ್ರದರ್ಸ್ ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್ (ರಿ) ಕೆದಂಬಾಡಿ ಇದರ ವಾರ್ಷಿಕ ಮಹಾಸಭೆ ಹಾಗೂ ನೂತನ ಸಮಿತಿ ರಚನೆ ಕಾರ್ಯಕ್ರಮವು ಬೈಲ್ ಬ್ರದರ್ಸ್ ಕ್ಲಬ್ ಸಭಾಂಗಣದಲ್ಲಿ ನಡೆಯಿತು.
ಇಂತಿಯಾಜ್ ಕೆದುಂಬಾಡಿ ಅವರು ನೆರೆದವರನ್ನು ಸ್ವಾಗತಿಸಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಆರಿಸ್ ಕೆದಂಬಾಡಿ ಅವರು ನೂತನ ಸಮಿತಿಯ ಆಯ್ಕೆ ಪ್ರಕ್ರಿಯೆಯನ್ನು ನೆರವೇರಿಸಿದರು.
ನೂತನ ಸಮಿತಿಯ ಗೌರವಾಧ್ಯಕ್ಷರಾಗಿ ಸಿದ್ದೀಕ್ ಕಲ್ಕಟ್ಟ , ಅಧ್ಯಕ್ಷರಾಗಿ ಅನ್ಸಾರ್ ಕೆದಂಬಾಡಿ, ಉಪಾಧ್ಯಕ್ಷರಾಗಿ ಇಮ್ತಿಯಾಜ್ ಕೆದಂಬಾಡಿ, ಪ್ರಧಾನ ಕಾರ್ಯದರ್ಶಿಯಾಗಿ ಫರ್ವಾಜ್ ಕೆದಂಬಾಡಿ , ಕಾರ್ಯದರ್ಶಿಯಾಗಿ , ಆದಿಲ್ ಮತ್ತು ಸಲಾಂ ಒಮಾನ್ ಕೋಶಾಧಿಕಾರಿಯಾಗಿ ಸಾದಿಕ್ ಖತರ್, ಕಾರ್ಯಕಾರಿಣಿ ಸದಸ್ಯರಾಗಿ ಸಿದ್ದೀಕ್ ಖತರ್, ಸಲಾಮ್ ಕೆದಂಬಾಡಿ, ಫವಾಝ್ ಕೆದಂಬಾಡಿ, ಹನೀಫ್ ಬಿ.ಎಮ್, ಸಲಾಮ್ ಮಸ್ಕತ್, ,ಆದಿಲ್ ಕೆದಂಬಾಡಿ, ಅವರು ಆಯ್ಕೆಯಾದರು. ಕೊನೆಯಲ್ಲಿ ಫರ್ವಾಝ್ ಕೆದಂಬಾಡಿ ಅವರು ಧನ್ಯವಾದಗೈದರು.