ಅದಾನಿ ಗ್ರೂಪ್ ಜೊತೆ ಸಂಬಂಧ ಹೊಂದಿದ್ದ ಸಂಸ್ಥೆಯ ನಿರ್ದೇಶಕ ಸ್ಥಾನಕ್ಕೆ ಬ್ರಿಟನ್ ಮಾಜಿ ಪ್ರಧಾನಿ ಸಹೋದರ ರಾಜೀನಾಮೆ
ಲಂಡನ್: ಅದಾನಿ ಸಂಸ್ಥೆಯ ಷೇರು ನಿರಂತರವಾಗಿ ಕುಸಿತ ಕಾಣುತ್ತಿರುವ ಹಿನ್ನೆಲೆಯಲ್ಲಿ ಈ ಸಂಸ್ಥೆಯೊಂದಿಗೆ ಸಂಬಂಧವನ್ನು ಹೊಂದಿರುವ ಯುಕೆ ಮೂಲದ ಹೂಡಿಕೆ ಸಂಸ್ಥೆಯಲ್ಲಿ ಡೈರೆಕ್ಟರ್ ಸ್ಥಾನದಲ್ಲಿದ್ದ ಯುಕೆ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಕಿರಿಯ ಸಹೋದರ ಲಾರ್ಡ್ ಜೋ ಜಾನ್ಸನ್ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಹಿಂಡೆನ್‌ಬರ್ಗ್ ರಿಸರ್ಚ್‌ನ ವರದಿಯ ನಂತರ, ಕೆಲವು ದಿನಗಳಲ್ಲಿ ಅದಾನಿ ಗ್ರೂಪ್‌ನ ಷೇರುಗಳಲ್ಲಿ ತೀವ್ರ ಕುಸಿತ ಕಾಣುತ್ತಿದ್ದು, ಇದರಿಂದ ಅದಾನಿ ಸಮೂಹಕ್ಕೆ 100 ಶತಕೋಟಿ ಡಾಲರ್ ಗೂ ಅಧಿಕ ನಷ್ಟ ಉಂಟಾಗಿದೆ ಎಂದು ಹೇಳಲಾಗಿದೆ.
2022ರ ಜೂನ್‌ನಲ್ಲಿ ಲಂಡನ್ ಮೂಲದ ಎಲಾರಾ ಕ್ಯಾಪಿಟಲ್ ಪಿಎಲ್‌ಸಿಯ ನಿರ್ದೇಶಕರಾಗಿ 51 ವರ್ಷದ ಲಾರ್ಡ್ ಜೋ ಜಾನ್ಸನ್ ನೇಮಕಗೊಂಡಿದ್ದರು. ಭಾರತೀಯ ಕಾರ್ಪೊರೇಟ್‌ಗಳಿಗೆ ನಿಧಿಯನ್ನು ಸಂಗ್ರಹಿಸುವ ಬಂಡವಾಳ ಮಾರುಕಟ್ಟೆಯ ವ್ಯಾಪಾರ ಎಂದು ತನ್ನನ್ನು ತಾನು ವಿವರಿಸಿಕೊಂಡ ಎಲಾರಾ, FPOನಲ್ಲಿ ಬುಕ್‌ರನ್ನರ್‌ಗಳಲ್ಲಿ ಒಂದಾಗಿದೆ. ಲಾರ್ಡ್ ಜೋ ಜಾನ್ಸನ್ ಅವರು ಡೊಮೇನ್ ಪರಿಣತಿಯ ಕೊರತೆಯಿಂದಾಗಿ ಈ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎಂದು ಎಲಾರಾ ಕ್ಯಾಪಿಟಲ್ ಸ್ಪಷ್ಟಪಡಿಸಿದೆ.