ಗಾಯಕಿ ವಾಣಿ ಜಯರಾಮ್ ನಿ#ಗೂಢ ಸಾ#ವು: ಮ#ರಣೋತ್ತರ ಪರೀಕ್ಷೆ ವರದಿ ಬಹಿರಂಗ...
ಚೆನ್ನೈ(Headlines Kannada): ಭಾರತೀಯ ಸಿನಿಮಾ ರಂಗದ ಹೆಸರಾಂತ, ಪದ್ಮಭೂಷಣ, ರಾಷ್ಟ್ರ ಪ್ರಶಸ್ತಿ ವಿಜೇತ ಹಿರಿಯ ಗಾಯಕಿ ವಾಣಿ ಜಯರಾಂ ಶನಿವಾರ ತಮ್ಮ ಮನೆಯಲ್ಲೇ ಅನುಮಾನಾಸ್ಪದವಾಗಿ ಸಾ#ವಿಗೀಡಾಗಿದ್ದು, ಈ ಸಾ#ವಿನ ಬಗ್ಗೆ ಅನುಮಾನ ಮೂಡಿತ್ತು.
ಅವರ ತಲೆಯಲ್ಲಿ ಗಾಯದ ಗುರುತು ಮತ್ತು ಬಿದ್ದ ಸ್ಥಳದಲ್ಲಿ ರಕ್ತದ ಕಲೆಗಳು ಕಾಣಿಸಿಕೊಂಡಿದ್ದರಿಂದ ಪೊಲೀಸರು ಅ#ಸಹಜ ಸಾ#ವು ಎಂದು ಕೇಸು ದಾಖಲಿಸಿದ್ದರು. ಜೊತೆಗೆ ಮ#ರಣೋತ್ತರ ಪರೀಕ್ಷೆಗೂ ವಾಣಿ ಅವರ ದೇ#ಹವನ್ನು ರವಾನಿಸಲಾಗಿತ್ತು. ಈಗ ವಾಣಿ ಜಯರಾಮ್ ಅವರ ಮ#ರಣೋತ್ತರ ಪರೀಕ್ಷೆಯ ವರದಿ ಬಹಿರಂಗವಾಗಿದೆ.
ವಾಣಿ ಜಯರಾಮ್ ಅವರ ಮ#ರಣೋತ್ತರ ವರದಿಯಲ್ಲಿ ಯಾವುದೇ ಅನುಮಾನವನ್ನು ವ್ಯಕ್ತ ಪಡಿಸಿಲ್ಲ. ಅವರ ಮನೆಯ ಬಾಗಿಲು ಒಳಗಿನಿಂದಲೇ ಲಾಕ್ ಆಗಿತ್ತು, ಯಾರೂ ಕೂಡ ಬಲವಂತವಾಗಿ ಮನೆಯೊಳಗೆ ಪ್ರವೇಶಿಸಿರುವ ಬಗ್ಗೆ ಸಾಕ್ಷ್ಯಗಳಿಲ್ಲ, ಅಲ್ಲದೆ, ಸಿಸಿ ಟಿವಿಯಲ್ಲೂ ಕೂಡ ಮನೆಯ ಸುತ್ತಮುತ್ತ ಯಾರೂ ಕೂಡ ಅನುಮಾಸ್ಪಾದವಾಗಿ ಓಡಾಡಿರುವ ಬಗ್ಗೆ ಮಾಹಿತಿ ಇಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ವಾಣಿ ಜಯರಾಮ್ ಅವರು ಮಲಗಿದ್ದ ಪಕ್ಕದಲ್ಲೇ ಕಟ್ಟಿಗೆ ಟೇಬಲ್ ಇದ್ದು, ಅದರ ಮೇಲೆ ವಾಣಿ ಬಿದ್ದಿದ್ದಾರೆ. ಹಾಗಾಗಿ ತಲೆಗೆ ಗಾಯವಾಗಿದ್ದು, ರಕ್ತಸ್ರಾವವಾಗಿದೆ. ಹೃ#ದಯಾಘಾತದಿಂದ ಅವರು ಸಾ#ವನ್ನಪ್ಪಿದ್ದಾರೆ. ಅಕ್ಕಪಕ್ಕದ ಮನೆಯ ಸಿಸಿಟಿವಿಯನ್ನು ಗಮನಿಸಿರುವ ಪೊಲೀಸರಿಗೆ ಅಲ್ಲಿ ಯಾರ ಸುಳಿವೂ ದೊರೆತಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.