ಟರ್ಕಿ, ಸಿರಿಯಾ ಭೂಕಂಪದಿಂದ 4,300 ಕ್ಕೂ ಹೆಚ್ಚು ಜನರ ಸಾ#ವು; ನೆಲಸಮವಾದ ಸಾವಿರಾರು ಕಟ್ಟಡಗಳು

ಟರ್ಕಿ, ಸಿರಿಯಾ ಭೂಕಂಪದಿಂದ 4,300 ಕ್ಕೂ ಹೆಚ್ಚು ಜನರ ಸಾ#ವು; ನೆಲಸಮವಾದ ಸಾವಿರಾರು ಕಟ್ಟಡಗಳು

ಟರ್ಕಿ: ಟರ್ಕಿ ಮತ್ತು ಸಿರಿಯಾದಲ್ಲಿ ಸೋಮವಾರ ಸಂಭವಿಸಿದ ಪ್ರಬಲ ಭೂಕಂಪದಲ್ಲಿ 4,300 ಕ್ಕೂ ಹೆಚ್ಚು ಜನರು ಸಾ#ವನ್ನಪ್ಪಿದ್ದಾರೆ. ಧರೆಗುರುಳಿದ ಸಾವಿರಾರು ಕಟ್ಟಡಗಳ ಅವಶೇಷಗಳಡಿ ಬದುಕುಳಿದವರಿಗಾಗಿ ಜನ ಬರೀಗೈಯಲ್ಲಿ ಅಗೆಯುತ್ತಿದ್ದಾರೆ.

ಟರ್ಕಿಯಲ್ಲಿ ರಿಕ್ಟರ್ ಮಾಪಕದಲ್ಲಿ 7.8 ತೀವ್ರತೆಯ ಭೂಕಂಪ ಸಂಭವಿಸಿದ್ದರಿಂದ ಸಾ#ವು ನೋ#ವುಗಳ ಸಂಖ್ಯೆ ಇನ್ನೂ ಹೆಚ್ಚಾಗುತ್ತಲೇ ಇದೆ.  ಅಪಾರ ಸಾ#ವು-ನೋವು ಉಂಟಾಗಿರುವುದರಿಂದ ಹಲವಾರು ದೇಶಗಳು ಸಹಾಯದ ಹಸ್ತ ನೀಡಿದೆ.  
ಟರ್ಕಿಯ ಸ್ಥಳೀಯ ಕಾಲಮಾನ ಪ್ರಕಾರ ಬೆಳಗಿನ ಜಾವ 4 ಗಂಟೆಯ ಸುಮಾರಿಗೆ ಮೊದಲ ಪ್ರಬಲ ಭೂಕಂಪ ಸಂಭವಿಸಿದ್ದು, ಜನರು ಇನ್ನೂ ಸವಿ ನಿದ್ರಿಸುತ್ತಿದ್ದರಿಂದ ಸಾವುನೋವಿನ ಸಂಖ್ಯೆ ಹೆಚ್ಚಾಗಿದೆ. 

Ads on article

Advertise in articles 1

advertising articles 2

Advertise under the article