ಕುರಕುಂದಾ ಗ್ರಾಮ ಪಂಚಾಯತಿಯಲ್ಲಿ ಆರೋಗ್ಯ ಅಮೃತ ಅಭಿಯಾನ ಶಿಬಿರ
ಯಾದಗಿರಿ: ಯಾದಗಿರಿ ಜಿಲ್ಲೆಯ ವಡಿಗೇರ ತಾಲೂಕಿನ ಕುರುಕುಂದ ಗ್ರಾಮ ಪಂಚಾಯಿತಿಯಲ್ಲಿ ಇಂದು ಅನಿಮಿಯ ಮುಕ್ತ ಮತ್ತು ಮುಟ್ಟಿನ ನೈರ್ಮಲ್ಯತೆ ಆರೋಗ್ಯ ಅಮೃತ ಅಭಿಯಾನದ ಒಂದು ದಿನದ ತರಬೇತಿ ಶಿಬಿರ ನಡೆಯಿತು ಸದರಿ ಅಭಿಯಾನದ ತರಬೇತಿಯ ಕೈಪಿಡಿಯನ್ನು ಗ್ರಾಮ ಪಂಚಾಯತಿ ಅಧ್ಯಕ್ಷರಾದ ಮಲ್ಲಮ್ಮ ಎಂ ವಗ್ಗನೋರ ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ. ಸಿದ್ಧಿವೀರಪ್ಪ ಅವರು ಬಿಡುಗಡೆ ಮಾಡಿದರು. ಕೆ ಎಚ್ ಪಿ ಟಿ ಯ ವಡಿಗೇರ ತಾಲೂಕು ಟಿ ಸಿ ದೇವಿಂದ್ರಪ್ಪ ಅವರು ಸ್ವಾಗತ ಕೋರಿದರು.
ಆರ್ ಸಿಎಚ್ಒ ನಿವೇದಿತ, ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಅಂಗನವಾಡಿ ಹಿರಿಯ ಮೇಲ್ವಿಚಾರಕಿಯಾದ. ಕವಿತಾ ಕುಲಕರ್ಣಿ ಅವರು ತರಬೇತಿ ನೀಡಿ, ರಕ್ತ ಹೀನತೆ, ಬಾಲ್ಯ ವಿವಾ ನಿಷೇಧ, ಅಪೌಷ್ಟಿಕತೆ, ಮಕ್ಕಳ ಹಕ್ಕುಗಳ ಸ್ಥಿತಿಗತಿಯ ಬಗ್ಗೆ, ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಕೆಲಸ ಮಾಡುವ ಕುರಿತು ಜನರ ಅಭಿಪ್ರಾಯ ಕೇಳಿಸಿದರು.
ಈ ಸಂದರ್ಭದಲ್ಲಿ ಆರ್ ಸಿಎಚ್ ಒ ನಿವೇದಿತಾ, ಗ್ರಾಮ ಪಂಚಾಯತ್ ಸದಸ್ಯರಾದ ಮಲ್ಲಪ್ಪ ಬಾವುರ್, ಮಕ್ತುಮು ಸಾಬು, ಅಮಾತ್ಯಪ್ಪ ಪೂಜಾರಿ, ಸಿದ್ದಪ್ಪ ಬೆಳಗುಂದಿ, ಮಲ್ಲಪ್ಪ ಗೋಡಿಹಾಳ, ಹುಸೇನ್ ಸಾಬ್ ಮುಲ್ಲಾ, ಅಂಗನವಾಡಿ ಕಾರ್ಯಕರ್ತರಾದ ಅಂಜಮ್ಮಗೌಡಸನಿ, ಮಾಲ ಬೇಗಂ, ಹಸೀನಾ ಬಾನು, ಹಾಗೂ ಆಶಾ ಕಾರ್ಯಕರ್ತರಾದ ಪದ್ದಾ, ಚಂದ್ರಕಲಾ, ನಾಗವೇಣಿ,
ಹಾಗೂ ಸ್ವಯಂಸೇವಕರಾದ. ಭೀಮಶಂಕರ್ D.K.ಕುರಿ ಮತ್ತು ಇನ್ನಿತರರು ಉಪಸ್ಥಿತರಿದ್ದರು.