ರಾಜ್ಯ ಬಜೆಟ್: ಕೇವಲ ಚುನಾವಣಾ ಗಿಮಿಕ್ ಬಜೆಟ್: ಇಕ್ಬಾಲ್ ಅಹ್ಮದ್ ಮುಲ್ಕಿ
Friday, February 17, 2023
ಮಂಗಳೂರು: ವಿಧಾನಸಭೆಗೆ ಚುನಾವಣೆಗೆ ತಿಂಗಳೆರಡು ಬಾಕಿಯಿರುವಾಗ ಮಂಡಿಸಿರುವ ರಾಜ್ಯ ಸರ್ಕಾರದ ಈ ಬಜೆಟ್ ಅಪ್ರಸ್ತುತ. ಈ ಬಜೆಟಿನ ಅಂಕಿ ಅಂಶಗಳು ಕೇವಲ ಅಲಂಕಾರಿಕ ಮಾತ್ರವಾಗಿದೆ ಎಂದು ಜೆಡಿಎಸ್ ದಕ್ಷಿಣ ಕನ್ನಡ ಕಾರ್ಯಾಧ್ಯಕ್ಷ ಇಕ್ಬಾಲ್ ಅಹ್ಮದ್ ಮುಲ್ಕಿ ಹೇಳಿದ್ದಾರೆ.
ರಾಜ್ಯ ಬಜೆಟ್ ಬಗ್ಗೆ ಹೇಳಿಕೆ ನೀಡಿರುವ ಅವರು, ಮುಂದಿನ ಚುನಾವಣೆಯನ್ನು ಗಮನದಲ್ಲಿಟ್ಟು ಭರವಸೆಗಳ ಮಹಪೂರವನ್ನರಿಸಿರುವ ಈ ಬಜೆಟ್ ನಿಂದಾಗಿ ಜನಸಾಮಾನ್ಯರಿಗೆ ಯಾವುದೇ ಪ್ರಯೋಜನವಿಲ್ಲ. ದಿನಬಳಕೆಯ ವಸ್ತುಗಳ ದರದಲ್ಲಿ ಇಳಿಕೆ ಮಾಡದಿರುವುದು ಮತ್ತೊಮ್ಮೆ ಇದು ಜನವಿರೋಧಿ ಸರ್ಕಾರವೆಂಬುವುದನ್ನು ಸಾಬೀತುಮಾಡಿದೆ.
ಈ ಬಜೆಟ್ ಒಟ್ಟಾರೆಯಾಗಿ ಚುನಾವಣೆಗಾಗಿ ಜನರನ್ನು ಮರಳು ಗೊಳಿಸುವಂತಹ ಬಜೆಟ್ ಎಂದು ಅವರು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.