ಪಾನ್-ಆಧಾರ್ ಕಾರ್ಡ್‌ಗಳ ಜೋಡಣೆ ಗಡುವು ಮುಂದೂಡಿಕೆ: ಜನಸಾಮಾನ್ಯರಿಗೆ ಕೊಂಚ ರಿಲೀಫ್
Tuesday, March 28, 2023
ಹೊಸದಿಲ್ಲಿ: ಮಾರ್ಚ್ 31 (ಶುಕ್ರವಾರ)ಕ್ಕೆ ಅಂತ್ಯವಾಗಳಿದ್ದ ಪಾನ್ ಮತ್ತು ಆಧಾರ್ ಕಾರ್ಡ್‌ಗಳನ್ನು ಜೋಡಣೆ ಗಡುವು ವಿಸ್ತರಿಸಲಾಗಿದ್ದು, ಇದರಿಂದ ಜನಸಾಮಾನ್ಯರು ನಿಟ್ಟಿಸಿರು ಬಿಡುವಂತಾಗಿದೆ.
ಹಲವು ದಿನಗಳಿಂದ ಪಾನ್ ಮತ್ತು ಆಧಾರ್ ಕಾರ್ಡ್‌ಗಳ ಜೋಡಣೆಗಾಗಿ ಪರದಾಡುತ್ತಿದ್ದ ಜನರಿಗೆ ಕೊಂಚ ರಿಲೀಫ್ ಸಿಕ್ಕಿದೆ. ಈ ಎರಡೂ ಗುರುತಿನ ಕಾರ್ಡ್‌ಗಳನ್ನು ಜೋಡಿಸಲು ಇರುವ ಕೊನೆಯ ದಿನಾಂಕವನ್ನು ಕೇಂದ್ರ ಸರ್ಕಾರ 2023ರ ಜೂನ್ 30ರವರೆಗೂ ವಿಸ್ತರಿಸಿದೆ ಎಂದು ಆದೇಶವೊಂದು ಹೊರಬಿದ್ದಿದೆ.