ಮಂಗಳೂರಿನ ಕಂಕನಾಡಿಯ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರದಲ್ಲಿ ನಡೆದ "ಕಂಕನಾಡಿ ಗರಡಿ 150 ನಮ್ಮೂರ ಸಂಭ್ರಮ"ಕ್ಕೆ ಭೇಟಿ ನೀಡಿದ ಇನಾಯತ್ ಅಲಿ
Wednesday, March 8, 2023
ಮಂಗಳೂರು: ಮಂಗಳೂರಿನ ಇತಿಹಾಸ ಪ್ರಸಿದ್ಧ ಕಂಕನಾಡಿಯ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರದಲ್ಲಿ "ಕಂಕನಾಡಿ ಗರಡಿ 150 ನಮ್ಮೂರ ಸಂಭ್ರಮ" ದ ಕೊನೆಯ ದಿನವಾದ ಮಂಗಳವಾರ ಶ್ರೀ ಕ್ಷೇತ್ರಕ್ಕೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅವರು ಭೇಟಿ ನೀಡಿದರು.
ಈ ವೇಳೆ ಕ್ಷೇತ್ರದ ಆಡಳಿತ ಸಮಿತಿ ಸದಸ್ಯರು ಅವರನ್ನು ಆತ್ಮೀಯವಾಗಿ ಸ್ವಾಗತಿಸಿ ಹೊರೆ ಕಾಣಿಕೆ ಶೇಖರಣಾ ಹಾಗೂ ಅನ್ನ ಛತ್ರದ ಸ್ಥಳವನ್ನು ವೀಕ್ಷಿಸಲು ಅವಕಾಶ ಕಲ್ಪಿಸಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ಪ್ರಥ್ವಿರಾಜ್ ಆರ್.ಕೆ, ಬಿ.ಎಲ್.ಪದ್ಮನಾಭ ಕೋಟಿಯಾನ್, ಮಂಗಳೂರು ಮಹಾ ನಗರ ಪಾಲಿಕೆಯ ಮಾಜಿ ಉಪ ಮೇಯರ್ ಪುರುಷೋತ್ತಮ್ ಚಿತ್ರಾಪುರ ಹಾಗೂ ಇನ್ನಿತರರು ಉಪಸ್ಥಿತರಿದ್ದರು.