ಜೀವನದಲ್ಲಿ ಜಿಗುಪ್ಸೆ: ಬ್ರಹ್ಮಾವರ ಹನೇಹಳ್ಳಿ ಗ್ರಾಮದಲ್ಲಿ ಯುವಕ ನೇಣಿಗೆ ಶರಣು
Wednesday, March 8, 2023
ಬ್ರಹ್ಮಾವರ: ಜೀವನದಲ್ಲಿ ಜಿಗುಪ್ಸೆಗೊಂಡ ಯುವಕನೋರ್ವ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬ್ರಹ್ಮಾವರ ತಾಲೂಕಿನ ಹನೇಹಳ್ಳಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ಹನೇಹಳ್ಳಿ ಗ್ರಾಮದ ನಿವಾಸಿ 30ವರ್ಷದ ಸುರೇಶ್ ಆತ್ಮಹತ್ಯೆ ಮಾಡಿಕೊಂಡ ಯುವಕ. ಈತ ನಿನ್ನೆ ಕೆಲಸಕ್ಕೆ ಹೋಗದೆ ಮನೆಯಲ್ಲೇ ಇದ್ದು, ವಿಶ್ರಾಂತಿಗಾಗಿ ಮನೆಯ ಎದುರಿನ ಪಾಳು ಬಿದ್ದ ಮನೆಗೆ ಹೋಗಿದ್ದನು. ಮಧ್ಯಾಹ್ನ ತಾಯಿ ಊಟಕ್ಕೆ ಕರೆಯಲು ಹೋದಾಗ ಸುರೇಶ್ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.