ಶಿರ್ವ ಫೈಝಲ್ ಇಸ್ಲಾಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಪ್ರೇರಣಾ ಶಿಬಿರ
Wednesday, March 8, 2023
ಶಿರ್ವ: ಶಿರ್ವ ಫೈಝಲ್ ಇಸ್ಲಾಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸೋಮವಾರ SSLC ವಿದ್ಯಾರ್ಥಿಗಳಿಗೆ ಪ್ರೇರಣಾ ಶಿಬಿರವನ್ನು ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಮೊಹಮ್ಮದ್ ಖಾಲೀದ್ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಶಿಕ್ಷಣ ತಜ್ಞೆ ಸುಪರ್ಣ ಶೆಟ್ಟಿ ಮಣಿಪಾಲ, ಮಕ್ಕಳಿಗೆ ಸ್ಪೂರ್ತಿದಾಯಕ ಮಾತುಗಳನ್ನಾಡಿ ಹುರಿದುಂಬಿಸಿದರು.
ವಿದ್ಯಾರ್ಥಿಗಳು ಮುಂದಿನ ಜೀವನ ರೂಪಿಸಿಕೊಳ್ಳುವುದು ಹೇಗೆ..? ಅವರಿಗೆ ಯಾವುದೆಲ್ಲ ಸ್ಫೂರ್ತಿ ನೀಡುತ್ತೆ...? ಭವಿಷ್ಯದಲ್ಲಿನ ಗುರಿಗಳನ್ನು ಹೇಗೆ ಸಾಧಿಸುವುದು..? ಯಶಸ್ವಿಯಾಗಲು ಏನೆಲ್ಲ ಮಾಡಬೇಕು ಎಂಬ ಕುರಿತು ಸವಿವರವಾದ ಮಾಹಿತಿಯನ್ನು ಸುಪರ್ಣ ಶೆಟ್ಟಿ ವಿದ್ಯಾರ್ಥಿಗಳಿಗೆ ನೀಡಿದರು.
ಕಾರ್ಯಕ್ರಮದಲ್ಲಿ ಸಫಾ ಎಲ್ಲರನ್ನು ಸ್ವಾತಗತಿಸಿದರು. ಸಹ ಶಿಕ್ಷಕಿ ನೌಸಿ ವಂದನಾರ್ಪಣೆಗೈದರು.