ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಗೊಳಿಸಿದ ಕಾಂಗ್ರೆಸ್: ವರುಣಾ ಕ್ಷೇತ್ರದಿಂದ ಸಿದ್ದರಾಮಯ್ಯ ಕಣಕ್ಕೆ: ಕರಾವಳಿ ಭಾಗದಲ್ಲಿ ಯಾರಿಗೆ ಟಿಕೆಟ್ ಸಿಕ್ಕಿದೆ ನೋಡಿ...
ಬೆಂಗಳೂರು: ಚುನಾವಣಾ ಹತ್ತಿರವಾಗುತ್ತಿದ್ದಂತೆಯೇ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಮೊದಲ ಪಟ್ಟಿಯಲ್ಲಿ 124 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಕಾಂಗ್ರೆಸ್ ಘೋಷಣೆ ಮಾಡಿದೆ.
ಭಾರೀ ಚರ್ಚೆಗೆ ಗ್ರಾಸವಾಗಿದ್ದ ಸಿದ್ದರಾಮಯ್ಯರ ಸ್ಪರ್ಧಾ ಕ್ಷೇತ್ರಕ್ಕೆ ಅಂತಿಮ ತೆರೆಬಿದ್ದಿದ್ದು, ವರುಣಾ ಕ್ಷೇತ್ರದಿಂದ ಸಿದ್ದರಾಮಯ್ಯನವರಿಗೆ ಟಿಕೆಟ್ ನೀಡಲಾಗಿದೆ. ಸಿದ್ದರಾಮಯ್ಯ ಈ ಹಿಂದೆ ಸ್ಪರ್ಧಿಸುತ್ತೇನೆ ಎಂದು ಘೋಷಿಸಿದ್ದ ಕೋಲಾರ ಹಾಗು ಅವರು ಈಗ ಶಾಸಕರಾಗಿರುವ ಬಾದಾಮಿ ಕ್ಷೇತ್ರದ ಅಭ್ಯರ್ಥಿಯ ಹೆಸರನ್ನು ಇನ್ನೂ ಘೋಷಣೆ ಮಾಡದೆ ಹಾಗೆಯೇ ಇರಿಸಲಾಗಿದೆ.
ಕನಕಪುರ ಕ್ಷೇತ್ರದಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ವಿಧಾನಸಭೆ ವಿಪಕ್ಷ ಉಪ ನಾಯಕ ಯು.ಟಿ ಖಾದರ್ ಮಂಗಳೂರು ಕ್ಷೇತ್ರದಿಂದ, ನಂಜನಗೂಡು ಕ್ಷೇತ್ರದಿಂದ ದ್ರವನಾರಾಯಣ ಪುತ್ರ ದರ್ಶನ್ ದ್ರವನಾರಾಯಣ, ರಾಜಾಜಿನಗರ ಕ್ಷೇತ್ರದಿಂದ ಇತ್ತೀಚೆಗೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಮಾಜಿ MLC ಪುಟ್ಟಣ್ಣಗೆ ಟಿಕೆಟ್ ನೀಡಲಾಗಿದೆ.
ಅಭ್ಯರ್ಥಿಗಳ ಮೊದಲ ಪಟ್ಟಿಯ ಹೆಸರು ಇಲ್ಲಿದೆ:
► ಕಾಗವಾಡ: ಭರಮಗೌಡ ಎ. ಕಾಗೆ
► ಕುಡಚಿ: ಮಹೇಂದ್ರ ಕೆ ತಮ್ಮನ್ನವರ್
►ಹುಕ್ಕೇರಿ: ಎಬಿ ಪಾಟೀಲ್
►ಯಮಕನಕರಡಿ: ಸತೀಶ್ ಜಾರಕಿಹೊಳಿ
►ಬೆಳಗಾವಿ ಗ್ರಾಮೀಣ: ಲಕ್ಷ್ಮಿ ಹೆಬ್ಬಾಳ್ಕರ್
►ಖಾನಾಪುರ: ಡಾ.ಅಂಜಲಿ ನಿಂಬಾಳ್ಕರ್
►ಬೈಲಹೊಂಗಲ: ಮಹಾಂತೇಶ್ ಶಿವಾನಂದ ಕೌಜಲಗಿ
►ರಾಮದುರ್ಗ: ಅಶೋಕ್ ಎಂ ಪಟ್ಟಣ
►ಜಮಖಂಡಿ: ಅನಂದ ಸಿದ್ದು ನ್ಯಾಮಗೌಡ
►ಹುನಗುಂದ: ವಿಜಯನಾಂದ ಕಾಶಪ್ಪನವರ್
►ಮುದ್ದೇಬಿಹಾಳ: ಸಿಎಸ್ ನಾಡಗೌಡ
►ಬಸವನ ಬಾಗೇವಾಡಿ: ಶಿವಾನಂದ ಪಾಟೀಲ್
►ಬಬಲೇಶ್ವರ: ಎಂಬಿ ಪಾಟೀಲ್
►ಇಂಡಿ: ಯಶವಂತರಾಯಗೌಡ ಪಾಟೀಲ್
►ಜೇವರ್ಗಿ: ಅಜಯ್ ಧರಂಸಿಂಗ್
►ಸುರಪುರ: ರಾಜಾವೆಂಕಟಪ್ಪ ನಾಯಕ್
►ಶಹಪುರ: ಶರಣಬಸಪ್ಪ ಗೌಡ
►ಚಿತಾಪುರ: ಪ್ರಿಯಾಂಕ್ ಖರ್ಗೆ
►ಸೇಡಂ: ಶಂಕರಪ್ರಕಾಶ್ ಪಾಟೀಲ್
►ಚಿಂಚೊಳ್ಳಿ: ಸುಭಾಶ್ ವಿ ರಾಥೋಡ್
►ಗುಲ್ಬರ್ಗಾ ಉತ್ತರ: ಖನೀಜ ಫಾತಿಮಾ
►ಆಳಂದ: ಬಿಆರ್ ಪಾಟೀಲ್
►ಹುಮ್ನಾಬಾದ್: ರಾಜಶೇಖರ್ ಬಿ ಪಾಟೀಲ್
►ಬೀದರ್ ದಕ್ಷಿಣ: ಅಶೋಕ್ ಖೇಣಿ
►ಬೀದರ್: ರಹೀಂ ಖಾನ್
►ಭಾಲ್ಕಿ: ಈಶ್ವರ್ ಖಂಡ್ರೆ
►ರಾಯಚೂರು ಗ್ರಾಮೀಣ: ಬಸನಗೌಡ ದದ್ದಲ್
►ಮಸ್ಕಿ: ಬಸನಗೌಡ ತುರ್ವಿಹಾಳ
►ಕುಷ್ಟಗಿ: ಅಮರೇಗೌಡ ಪಾಟೀಲ್ ಬಯ್ಯಾಪುರ
►ಕನಕಗಿರಿ: ಶಿವರಾಜ್ ತಂಗಡಗಿ
►ಯಲಬುರ್ಗ: ಬಸವರಾಜ್ ರಾಯರೆಡ್ಡಿ
►ಕೊಪ್ಪಳ: ಕೆ.ರಾಘವೇಂದ್ರ
►ಗದಗ: ಹೆಚ್ ಕೆ ಪಾಟೀಲ್
►ರೋಣ: ಜಿಎಸ್ ಪಾಟೀಲ್
►ಹುಬ್ಬಳ್ಳಿ-ಧಾರವಾಡ (ಪೂರ್ವ): ಪ್ರಸಾದ್ ಅಬ್ಬಯ್ಯ
►ಹಳಿಯಾಳ: ಆರ್ ವಿ ದೇಶಪಾಂಡೆ
►ಕಾರವಾರ: ಸತೀಶ್ ಸೈಲ್
►ಭಟ್ಕಳ: ಎಂ ಸುಬ್ಬವೈದ್ಯ
►ಹಾನಗಲ್: ಶ್ರೀನಿವಾಸ್ ಮಾನೆ
►ಹಾವೇರಿ: ರುದ್ರಪ್ಪ ಲಮಾಣಿ
►ಬ್ಯಾಡಗಿ: ಬಸವರಾಜ್ ಎನ್ ಶಿವಣ್ಣನ್ನರ್
►ಹಿರೇಕೆರೂರು: ಯುಬಿ ಬಣಕರ್
►ರಾಣೇಬೆನ್ನೂರು: ಪ್ರಕಾಶ್ ಕೆ ಕೋಳಿವಾಡ
►ಹಡಗಲಿ: ಪಿಟಿ ಪರಮೇಶ್ವರ್ ನಾಯಕ್
►ಹಗರಿಬೊಮ್ಮನಹಳ್ಳಿ: ಭೀಮಾ ನಾಯಕ್
►ವಿಜಯನಗರ: ಹೆಚ್ ಆರ್ ಗವಿಯಪ್ಪ
►ಕಂಪ್ಲಿ: ಜೆಎನ್ ಗಣೇಶ್
►ಬಳ್ಳಾರಿ: ಬಿ ನಾಗೇಂದ್ರ
►ಸಂಡೂರು: ಇ ತುಕಾರಾಂ
►ಚಳ್ಳಕೆರೆ: ಟಿ ರಘುಮೂರ್ತಿ
►ಹಿರಿಯೂರು: ಡಿ ಸುಧಾಕರ್
►ಹೊಸದುರ್ಗ: ಗೋವಿಂದಪ್ಪ ಬಿ.ಜಿ
►ದಾವಣಗೆರೆ ಉತ್ತರ: ಎಸ್ ಎಸ್ ಮಲ್ಲಿಕಾರ್ಜುನ್
►ದಾವಣಗೆರೆ ದಕ್ಷಿಣ: ಶಾಮನೂರು ಶಿವಶಂಕರಪ್ಪ
►ಮಾಯಕೊಂಡ: ಕೆಎಸ್ ಬಸವರಾಜು
►ಭದ್ರಾವತಿ: ಸಂಗಮೇಶ್ವರ್ ಬಿಕೆ
►ಸೊರಬ: ಮಧು ಬಂಗಾರಪ್ಪ
►ಸಾಗರ: ಗೋಪಾಲಕೃಷ್ಣ
►ಬೈಂದೂರು: ಕೆ ಗೋಪಾಲ ಪೂಜಾರಿ
►ಕುಂದಾಪುರ: ದಿನೇಶ್ ಹೆಗಡೆ
►ಕಾಪು: ವಿನಯ ಕುಮಾರ್ ಸೊರಕೆ
►ಮಾಗಡಿ-ಎಚ್.ಸಿ. ಬಾಲಕೃಷ್ಣ
►ರಾಮನಗರ-ಇಕ್ಬಾಲ್ ಹುಸೈನ್ ಎಚ್.ಎ
►ಕನಕಪುರ-ಡಿ.ಕೆ. ಶಿವಕುಮಾರ್
►ಮಳವಳ್ಳಿ ಎಸ್.ಸಿ- ಪಿ.ಎಂ. ನರೇಂದ್ರಸ್ವಾಮಿ
►ಶ್ರೀರಂಗಪಟ್ಟಣ-ಎ.ಬಿ. ರಮೇಶ್ ಬಂಡಿಸಿದ್ದೇಗೌಡ
►ನಾಗಮಂಗಲ-ಎನ್. ಚೆಲುವರಾಯಸ್ವಾಮಿ
►ಹೊಳೆನರಸೀಪುರ-ಶ್ರೇಯಸ್ ಎಂ.ಪಟೇಲ್
►ಸಕಲೇಶಪುರ(ಎಸ್ಸಿ)-ಮುರಳಿ ಮೋಹನ್
►ಬೆಳ್ತಂಗಡಿ-ರಕ್ಷಿತ್ ಶಿವರಾಮ್
►ಮೂಡಬಿದಿರೆ-ಮಿಥುನ್ ಎಮ್. ರೈ.
►ಮಂಗಳೂರು-ಯು.ಟಿ. ಅಬ್ದುಲ್ ಖಾದರ್ ಅಲಿ ಫರೀದ್
►ಬಂಟ್ವಾಳ-ರಮನಾಥ್ ರೈ ಬಿ
►ಸುಳ್ಯ- ಎಸ್ಸಿ- ಕೃಷ್ಣಪ್ಪ ಜಿ
►ವಿರಾಜಪೇಟೆ - ಎ.ಎಸ್ ಪೊನ್ನಣ್ಣ
►ಪಿರಿಯಾಪಟ್ಟಣ-ಕೆ. ವೆಂಕಟೇಶ್
►ಕೃಷ್ಣರಾಜನಗರ-ಡಿ. ರವಿಶಂಕರ್
►ಹುಣಸೂರು-ಎಚ್.ಪಿ ಮಂಜುನಾಥ್
►ಎಚ್ಡಿ ಕೋಟೆ-ಎಸ್ಟಿ-ಅನಿಲ್ ಕುಮಾರ್. ಸಿ
►ನಂಜನಗೂರು-ಎಸ್ಸಿ-ದರ್ಶನ್ ಧ್ರುವನಾರಾಯಣ
► ತಿ. ನರಸೀಪುರ- ಡಾ. ಎಚ್.ಸಿ ಮಹದೇವಪ್ಪ
►ನರಸಿಂಹರಾಜ-ತನ್ವೀರ್ ಸೇಠ್
►ವರುಣ-ಸಿದ್ಧರಾಮಯ್ಯ