ಬೀಫ್ ರಫ್ತಿನಲ್ಲಿ ಬಿಜೆಪಿ ಆಡಳಿತದ ಭಾರತ ನಂ1 ಆಗಿದ್ದು ಹೇಗೆ ? ನಂದಿನಿಯನ್ನು ಗುಜರಾತಿನ ಅಮುಲ್‌ಗೆ ಬಲಿ ಕೊಡಲು ಪೂರ್ವಸಿದ್ಧತೆಯೇ ?: ಬಿಜೆಪಿಯನ್ನು ಕೆಣಕಿದ ಕಾಂಗ್ರೆಸ್
ಬೆಂಗಳೂರು: ಹಾಲು ಉತ್ಪಾದನೆಯ ಕುಸಿತ ಹಾಗೂ ಬೀಫ್ ರಫ್ತಿನಲ್ಲಿ ಏರಿಕೆಗಳು ಬಿಜೆಪಿ ಹೇಳುವ ಗೋರಕ್ಷಣೆಯ ಡೋಂಗಿತನವನ್ನು ಬಯಲು ಮಾಡಿವೆ ಎಂದು ಬಿಜೆಪಿ ಸರಕಾರದ ವಿರುದ್ಧ ಕಾಂಗ್ರೆಸ್ ತೀವ್ರ ವಾಗ್ದಾಳಿ ನಡೆಸಿದೆ.
ಗುರುವಾರ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ''ಪಾಶ್ಚಾತ್ಯ ರಾಷ್ಟ್ರಗಳಂತೆ ಭಾರತದಲ್ಲಿ ಮಾಂಸಕ್ಕಾಗಿ ಸಾಕುವ 'ಗೋವುಗಳ ಫಾರಂ' ಪರಿಪಾಠವಿಲ್ಲ, ಆದರೂ ಬೀಫ್ ರಫ್ತಿನಲ್ಲಿ ಬಿಜೆಪಿ ಆಡಳಿತದಲ್ಲಿ ಭಾರತ ನಂ1 ಆಗಿದ್ದು ಹೇಗೆ ಎಂಬುದು ಈ ಶತಮಾನದ ನಿಗೂಢ ಪ್ರಶ್ನೆ!'' ಎಂದು ಕಿಡಿಕಾರಿದೆ.
'ನಂದಿನಿಯ ಮೇಲೆ ಅಮಿತ್ ಶಾ ಅವರ ವಕ್ರದೃಷ್ಟಿ ಬಿದ್ದಿದ್ದಕ್ಕೂ, ಹಾಲಿನ ಅಭಾವ ಸೃಷ್ಟಿಯಾಗಿದ್ದಕ್ಕೂ ಸಂಬಂಧವಿದೆಯೇ @BSBommai ಅವರೇ? ರಾಜ್ಯದಲ್ಲಿ ಹಾಲಿನ ಉತ್ಪಾದನೆ ಕುಂಠಿತವಾಗಿದೆಯೇ ಅಥವಾ ನಂದಿನಿ ಉತ್ಪನ್ನಗಳ ಕೃತಕ ಅಭಾವ ಸೃಷ್ಟಿಸಲಾಗಿದೆಯೇ? ಇದೆಲ್ಲವೂ ನಂದಿನಿಯನ್ನು ಗುಜರಾತಿನ ಅಮುಲ್‌ಗೆ ಬಲಿ ಕೊಡಲು ಪೂರ್ವಸಿದ್ಧತೆಯೇ @BJP4Karnataka?' ಎಂದು ರಾಜ್ಯ ಬಿಜೆಪಿ ಸರಕಾರವನ್ನು ಕಾಂಗ್ರೆಸ್ ಪ್ರಶ್ನಿಸಿದೆ.
ಹಾಲು ಉತ್ಪಾದನೆಯ ಕುಸಿತ ಹಾಗೂ ಬೀಫ್ ರಫ್ತಿನಲ್ಲಿ ಏರಿಕೆಗಳು ಬಿಜೆಪಿ ಹೇಳುವ ಗೋರಕ್ಷಣೆಯ ಡೋಂಗಿತನವನ್ನು ಬಯಲು ಮಾಡಿವೆ.
— Karnataka Congress (@INCKarnataka) March 9, 2023
ಪಾಶ್ಚಾತ್ಯ ರಾಷ್ಟ್ರಗಳಂತೆ ಭಾರತದಲ್ಲಿ ಮಾಂಸಕ್ಕಾಗಿ ಸಾಕುವ 'ಗೋವುಗಳ ಫಾರಂ' ಪರಿಪಾಠವಿಲ್ಲ, ಆದರೂ ಬೀಫ್ ರಫ್ತಿನಲ್ಲಿ ಬಿಜೆಪಿ ಆಡಳಿತದಲ್ಲಿ ಭಾರತ ನಂ1 ಆಗಿದ್ದು ಹೇಗೆ ಎಂಬುದು ಈ ಶತಮಾನದ ನಿಗೂಢ ಪ್ರಶ್ನೆ!
ನಂದಿನಿಯ ಮೇಲೆ ಅಮಿತ್ ಶಾ ಅವರ ವಕ್ರದೃಷ್ಟಿ ಬಿದ್ದಿದ್ದಕ್ಕೂ, ಹಾಲಿನ ಅಭಾವ ಸೃಷ್ಟಿಯಾಗಿದ್ದಕ್ಕೂ ಸಂಬಂಧವಿದೆಯೇ @BSBommai ಅವರೇ?
— Karnataka Congress (@INCKarnataka) March 9, 2023
ರಾಜ್ಯದಲ್ಲಿ ಹಾಲಿನ ಉತ್ಪಾದನೆ ಕುಂಠಿತವಾಗಿದೆಯೇ ಅಥವಾ ನಂದಿನಿ ಉತ್ಪನ್ನಗಳ ಕೃತಕ ಅಭಾವ ಸೃಷ್ಟಿಸಲಾಗಿದೆಯೇ?
ಇದೆಲ್ಲವೂ ನಂದಿನಿಯನ್ನು ಗುಜರಾತಿನ ಅಮುಲ್‌ಗೆ ಬಲಿ ಕೊಡಲು ಪೂರ್ವಸಿದ್ಧತೆಯೇ @BJP4Karnataka?