ವಿಧಾನಸಭೆ ಚುನಾವಣೆ; ಕಾಂಗ್ರೆಸಿನಲ್ಲಿ ಜಾತಿವಾರು ಲೆಕ್ಕದಲ್ಲಿ ಟಿಕೆಟ್​ಗಾಗಿ ಹೆಚ್ಚಿದ ಲಾಬಿ; ಯಾವೆಲ್ಲ ಜಾತಿ-ಸಮುದಾಯದವರು ಟಿಕೆಟ್​ಗೆ ಬೇಡಿಕೆ ಇಟ್ಟಿದ್ದಾರೆ ನೋಡಿ...

ವಿಧಾನಸಭೆ ಚುನಾವಣೆ; ಕಾಂಗ್ರೆಸಿನಲ್ಲಿ ಜಾತಿವಾರು ಲೆಕ್ಕದಲ್ಲಿ ಟಿಕೆಟ್​ಗಾಗಿ ಹೆಚ್ಚಿದ ಲಾಬಿ; ಯಾವೆಲ್ಲ ಜಾತಿ-ಸಮುದಾಯದವರು ಟಿಕೆಟ್​ಗೆ ಬೇಡಿಕೆ ಇಟ್ಟಿದ್ದಾರೆ ನೋಡಿ...

ಬೆಂಗಳೂರು:  ಈ ಬಾರಿಯ ವಿಧಾನಸಭೆ ಚುನಾವಣೆಗೆ ದಿನ ಹತ್ತರವಾಗುತ್ತಿದ್ದಂತೆ ಟಿಕೆಟ್ ಲಾಬಿ ಕೂಡ ಜೋರಾಗಿಯೇ ನಡೆಯುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಈ ಬಾರಿ ಆಡಳಿತದ ಚುಕ್ಕಾಣಿ ಹಿಡಿಯುವುದು ಬಹುತೇಕ ಖಚಿತ ಎಂಬ ಸುದ್ದಿ ಎಲ್ಲೆಡೆ ಹರಡಿರುವುದರಿಂದ ಟಿಕೇಟಿಗಾಗಿ ಲಾಬಿ ಕೂಡ ಹೆಚ್ಚಿದೆ.

ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಗೆ ಕಾಂಗ್ರೆಸ್ ಸಿದ್ಧತೆ ನಡೆಸುತ್ತಿದ್ದು, ಈ ಮಧ್ಯೆ ಜಾತಿವಾರು ಲೆಕ್ಕದಲ್ಲಿ ಟಿಕೆಟ್​ ಲಾಬಿ ಆರಂಭವಾಗಿದೆ. ಬಹುತೇಕ ಎಲ್ಲ ಸಮುದಾಯ, ಜಾತಿ, ಧರ್ಮದವರು ತಮ್ಮವರಿಗೆ ಟೆಕೆಟ್ ನೀಡುವಂತೆ ಒತ್ತಡ ಕೂಡ ಹಾಕುತ್ತಿದ್ದಾರೆ.

ಲಿಂಗಾಯಿತ, ಒಕ್ಕಲಿಗ, ಬ್ರಾಹ್ಮಣ, ಕುರುಬ, ಮುಸ್ಲಿಂ, ಕ್ರಿಶ್ಚಿಯನ್, ಪರಿಶಿಷ್ಟ ಜಾತಿ-ಪಂಗಡ, ಒಬಿಸಿ ಸೇರಿದಂತೆ ಪ್ರಮುಖ ಸಮುದಾಯದ ಮುಖಂಡರು ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿ ಲಾಬಿ ನಡೆಸಿದ್ದಾರೆ.

ಬೇಡಿಕೆಯ ವಿವರ ಈ ರೀತಿ ಇದೆ...

ವೀರಶೈವ ಲಿಂಗಾಯತ ಸಮುದಾಯದವರು 70 ಮಂದಿಗೆ ಟಿಕೆಟ್'ಗೆ ಬೇಡಿಕೆ ಇಟ್ಟಿದ್ದಾರೆ.

ಒಕ್ಕಲಿಗ ಸಮುದಾಯಕ್ಕೆ 48 ಟಿಕೆಟ್​ಗೆ ಬೇಡಿಕೆ

ಕುರುಬ ಸಮುದಾಯದಿಂದ 40 ಟಿಕೆಟ್​ಗೆ ಬೇಡಿಕೆ

ಪರಿಶಿಷ್ಟ ಜಾತಿಯಿಂದ 30 ಟಿಕೆಟ್​ಗೆ ಬೇಡಿಕೆ

ಪರಿಶಿಷ್ಟ ಪಂಗಡದಿಂದ 20 ಟಿಕೆಟ್​ಗೆ ಬೇಡಿಕೆ

ಮುಸ್ಲಿಂ ಸಮುದಾಯದಿಂದ 25 ಟಿಕೆಟ್​ಗೆ ಬೇಡಿಕೆ

ಒಬಿಸಿ ಸಮುದಾಯಕ್ಕೆ 52 ಟಿಕೆಟ್​ಗೆ ಬೇಡಿಕೆ

Ads on article

Advertise in articles 1

advertising articles 2

Advertise under the article